ದೇರಳಕಟ್ಟೆ: "Care of the Critically Ill Surgical Patient" ಕೋರ್ಸ್ ಆರಂಭಿಸಿದ ನಿಟ್ಟೆ ವಿಶ್ವವಿದ್ಯಾಲಯ

Update: 2023-10-04 08:30 GMT

ಮಂಗಳೂರು: ಇಂಗ್ಲೆಂಡ್ ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸಂಸ್ಥೆಯ ಸಹಯೋಗದೊಂದಿಗೆ ದೇರಳಕಟ್ಟೆಯ ನ್ಯಾ. ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಿಂದ ‘ಗಂಭೀರ ಸ್ಥಿತಿಯಲ್ಲಿರುವ ಶಸ್ತ್ರಚಿಕಿತ್ಸಾ ರೋಗಿಗಳ ಆರೈಕೆ’ ಕೋರ್ಸ್ ಗೆ ಅಕ್ಟೋಬರ್ 2, 2023ರಂದು ಚಾಲನೆ ನೀಡಲಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಈ ಕೋರ್ಸ್ ಅನ್ನು ಪ್ರಾರಂಭಿಸಿದ ಪ್ರಪ್ರಥಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ನಿಟ್ಟೆ ವಿಶ್ವವಿದ್ಯಾಲಯವು ಪಾತ್ರವಾಗಿದೆ. ಇದು ರಜತ ಮಹೋತ್ಸವದ ಸಂಭ್ರಮದಲ್ಲಿರುವ ನಿಟ್ಟೆ ವಿಶ್ವವಿದ್ಯಾಲಯದ ಮುಡಿಗೆ ಮತ್ತೊಂದು ಪ್ರತಿಷ್ಠೆಯ ಗರಿ ಸೇರಿಕೊಂಡಂತಾಗಿದೆ.

ಪ್ರತಿಷ್ಠಿತ ಶಸ್ತ್ರ ಚಿಕಿತ್ಸಕರ ಗುಂಪು ಹಾಗೂ ಇಂಗ್ಲೆಂಡ್ ನ 'ದಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್' ಸಂಸ್ಥೆಯ ಹಿರಿಯ ವೈದ್ಯರು ಭಾರತಕ್ಕೆ ಆಗಮಿಸಿ, ಶಸ್ತ್ರಚಿಕಿತ್ಸೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡಿರುವ ರೋಗಿಗಳನ್ನು ಹೇಗೆ ಗುರುತಿಸಬೇಕು ಹಾಗೂ ಆರೈಕೆ ಮಾಡಬೇಕು ಎಂಬ ಕುರಿತು ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಬೋಧಿಸಲಿದ್ದಾರೆ.

ಈ ಕೋರ್ಸ್ ನ ಚಾಲನಾ ಕಾರ್ಯಕ್ರಮದಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸಂಸ್ಥೆಯ Care of the Critically Ill Surgical Patient ವಿಭಾಗದ ನಿರ್ದೇಶಕರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೌರವ ಅತಿಥಿಗಳ ಪೈಕಿ ಡಾ. ಶಾಂತಾರಾಮ್ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ, ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿ ಶ್ರೀನಿವಾಸನ್ ರವಿ, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸಂಸ್ಥೆಯ ಡಾ. ಪಿ.ಎಸ್.ಪ್ರಕಾಶ್, ಕ್ಷೇಮ ಸಂಸ್ಥೆಯ ಡೀನ್ ಡಾ. ಭಾರ್ಗವನ್ ಕೆ.ಆರ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎ.ಜಿ.ಜಯಕೃಷ್ಣನ್ ಹಾಗೂ ಕೋರ್ಸ್ ನ ಸಮನ್ವಯಕಾರರು ಉಪಸ್ಥಿತರಿದ್ದರು.





 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News