ಉಳ್ಳಾಲ: ಈದ್ ಮೆರವಣಿಗೆ ಯಲ್ಲಿ ಬೈಕ್ ರ‍್ಯಾಲಿ, ಭಿತ್ತಿ ಪತ್ರ ಪ್ರದರ್ಶನಕ್ಕೆ ಅವಕಾಶ ಇಲ್ಲ: ದರ್ಗಾ ಅಧ್ಯಕ್ಷ ಹನೀಫ್ ಹಾಜಿ

Update: 2024-09-14 07:40 GMT

ಉಳ್ಳಾಲ : ಈದ್ ಮಿಲಾದ್ ಪ್ರಯುಕ್ತ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಹಾಗೂ ಹಝ್ರತ್ ಸಯ್ಯಿದ್ ಮದನಿ ದರ್ಗಾ ವತಿಯಿಂದ ನಡೆಯುವ ಬೃಹತ್ ಸ್ವಲಾತ್ ಮೆರವಣಿಗೆ ಸೆ.16 ಸೋಮವಾರ ಬೆಳಗ್ಗೆ 7.30 ಕ್ಕೆ ಕೋಟೆಪುರ ಮಸೀದಿ ಯಿಂದ ಕಾಲ್ನಡಿಗೆ ಮೂಲಕ ಹೊರಟು ಮುಕ್ಕಚ್ಚೇರಿ, ಅಝಾದ್ ನಗರ ರಸ್ತೆ ಯಾಗಿ ಉಳ್ಳಾಲ ದರ್ಗಾ ವರೆಗೆ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೆರವಣಿಗೆಯಲ್ಲಿ ಹಸಿರು ಪತಾಕೆ ಹೊರತು ಪಡಿಸಿ ಇತರ ಯಾವುದೇ ಧ್ವಜ ಬಳಕೆಗೆ ಅವಕಾಶ ಇರುವುದಿಲ್ಲ. ಅಹ್ಲುಸುನ್ನತ್ ವಲ್ ಜಮಾಅತ್ ಗೆ ಸಂಬಂಧಪಡದ ಕರಪತ್ರ , ಭಿತ್ತಿಪತ್ರ ಪ್ರದರ್ಶನ, ಅನಗತ್ಯ ಘೋಷಣೆ ನಿರ್ಬಂಧಿಸಲಾಗಿದೆ. ಬೈಕ್ ರ‍್ಯಾಲಿ, ಅಸಭ್ಯವಾಗಿ ವರ್ತಿಸುವುದು, ಅಸಭ್ಯ ರೀತಿಯ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ಸಭ್ಯತೆ ಹಾಳು ಮಾಡಲು ಅವಕಾಶ ಇರುವುದಿಲ್ಲ. ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಮೀಲಾದ್ ಜಾಥಾ ನಡೆಸಲಾಗುವುದು ಎಂದು ಹೇಳಿದರು.

ಜಮಾಅತ್ ನಿಂದ ಹೊರಗಿನಿಂದ ಮೀಲಾದ್ ಜಾಥಾ ಮೂಲಕ ಬರುವವರು ಶಿಸ್ತು ಪಾಲನೆ ಮಾಡಬೇಕು. ಅಶಿಸ್ತಿನಿಂದ ವರ್ತಿಸಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡುವಂತಿಲ್ಲ. ಈ ಬಗ್ಗೆ ಆಯಾ ಜಮಾಅತ್ ಗಳಿಗೆ ಪತ್ರ ಮೂಲಕ ಸೂಚನೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News