ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಉಳ್ಳಾಲ ಬೀಚ್ ಸ್ವಚ್ಛತಾ ದಿನಾಚರಣೆ
ಮಂಗಳೂರು: ಪ್ರತಿಷ್ಠಿತ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಉಳ್ಳಾಲ ಬೀಚ್ ಸ್ವಚ್ಛತಾ ದಿನಾಚರಣೆಯನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.
ʼಸುಸ್ಥಿರತೆಯಲ್ಲಿ ಆವಿಷ್ಕಾರಿ ಮನೋಭಾವದ ನಾಯಕರನ್ನು ಬೆಳೆಸುವುದುʼ ಈ ಅಭಿಯಾನದ ಉದ್ದೇಶವಾಗಿತ್ತು.
ಕಾರ್ಯಕ್ರಮದ ಮಾರ್ಗದರ್ಶಿಗಳಾಗಿದ್ದ ಬ್ಯಾರೀಸ್ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಸ್.ಐ. ಮಂಜುರ್ ಬಾಷಾ ಅವರು ಸಮುದ್ರ ತೀರದ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿದರು.
BIES, BEADS ಪ್ರಾಂಶುಪಾಲರು, BIT Polytechnic ನಿರ್ದೇಶಕರೊಂದಿಗೆ ಇತರ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಳ್ಳಾಲ ಬೀಚ್ ಸ್ವಚ್ಛತೆಗೆ ಕೈಜೋಡಿಸಿದ್ದರು.
ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಸಮೂಹವು ತೆಗೆದುಕೊಂಡಿರುವ ದಿಟ್ಟ ನಿರ್ಧಾರಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದ್ದು, ಸುಸ್ಥಿರತೆಗೆ ದಾರಿದೀಪವಾಗಿತ್ತು. ಯುವ ಮನಸ್ಸುಗಳಲ್ಲಿ ಸುಸ್ಥಿರತೆ, ವಾಸ್ತುಶಿಲ್ಪದ ಕುರಿತು ಮೋಹ ಹುಟ್ಟಿಸುವುದು ಹಾಗೂ ಪರಿಸರ ಕುರಿತು ಜಾಗೃತಿಯನ್ನು ಬೆಳೆಸುವುದು ಕಾರ್ಯಕ್ರಮದ ಆಶಯವಾಗಿತ್ತು.
ಸಾಗರ ಮಾಲಿನ್ಯದ ವಿರುದ್ಧ ಹೋರಾಡುವುದು ಹಾಗೂ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಗಳಿಂದ ಸಮುದ್ರ ತೀರಗಳನ್ನು ಮಲಿನಗೊಳಿಸುವ ಅಪಾಯಕಾರಿ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವುದು ಬೀಚ್ ಸ್ವಚ್ಛತಾ ದಿನಾಚರಣೆ ಉದ್ದೇಶ ಹೊಂದಿತ್ತು.
ಉಳ್ಳಾಲ ತೀರ ಸ್ವಚ್ಛತಾ ಅಭಿಯಾನದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.