ಪಾಕ್ ಗೆ ಸ್ನೇಹ ಹಸ್ತದ ವಾಜಪೇಯಿ ನಿರ್ಧಾರಕ್ಕೆ ನಾವು ಬೆಲೆ ತೆರ ಬೇಕಾಯಿತು : ಚಕ್ರವರ್ತಿ ಸೂಲಿಬೆಲೆ

Update: 2023-10-09 18:36 GMT

ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ಜೊತೆ ಸ್ನೇಹ ಹಸ್ತ ಚಾಚುವ ನಿರ್ಧಾರ ಅದಕ್ಕೆ ನಾವು ಬೆಲೆ ತೆರಬೇಕಾಯಿತು. ಆದರೆ ದೇಶದ ಪ್ರಧಾನಿ ಮೋದಿಯಾದ ಬಳಿಕ ಪರಿಸ್ಥಿತಿ ಬದಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿ ಪ್ರಧಾನಿ ಮೋದಿಯ ನಿರ್ಧಾರಗಳನ್ನು ಹೊಗಳಿದರು.

ಬಜರಂಗದಳ ನೇತೃತ್ವದಲ್ಲಿ ಸೆ.25ರಿಂದ ಚಿತ್ರದುರ್ಗದಿಂದ ಆರಂಭಗೊಂಡ ಶೌರ್ಯ ಜಾಗರಣ ರಥಯಾತ್ರೆ ಸೋಮವಾರ ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಇಸ್ರೇಲ್ -ಹಮಾಸ್ ನಡುವಿನ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಸೂಲಿಬೆಲೆ ಭಾರತದ ನರೇಂದ್ರ ಮೋದಿ ಇಸ್ರೇಲ್‌ನ್ನು ಬೆಂಬಲಿಸುತ್ತಿದ್ದಾರೆ. ಇಸ್ರೇಲ್ ಕೂಡಾ ಮೋದಿಯವರಿಗೆ ಗೌರವ ನೀಡಿದೆ. ನೆಹರೂ ಕಾಲದಲ್ಲಿ ಭಾರತ ಪ್ಯಾಲೆಸ್ತಿನ್ ಪರ ವಹಿಸಿತ್ತು. ಇಸ್ರೇಲ್ ನ್ನು ಬೆಂಬಲಿಸಲಿಲ್ಲ ಎಂದು ಸೂಲಿಬೆಲೆ ನೆಹರು ನಿರ್ಧಾರವನ್ನು ಟೀಕಿಸಿದರು.

ಸ್ಟಾಲಿನ್ ಮಂಗಳೂರಿನಲ್ಲಿ ಸನಾತನ ಧರ್ಮ ನಾಶಮಾಡಬೇಕು ಎಂದು ಹೇಳಿಕೆ ನೀಡಿದ್ದರೆ ಬಹುಶಃ ವಾಪಾಸು ಹೋಗಲು ಸಾಧ್ಯವಿರಲಿಲ್ಲ ಇಲ್ಲಿ ಬಜರಂಗದಳ ಸಂಘಟನೆ ಅಷ್ಟು ಬಲಿಷ್ಠವಾಗಿದೆ ಎಂದು ನಮೋ ಬ್ರಿಗೇಡ್ ನ ಮುಖಂಡ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ.

ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶಕ್ತಿ ಗುರುಪೀಠದ ಮುಕ್ತಾನಂದ ಶ್ರೀ ಮಾತನಾಡುತ್ತಾ, ಮಂಗಳೂರಿನಲ್ಲಿ ಬಜರಂಗದಳದ 500ಕ್ಕೂ ಹೆಚ್ಚು ಘಟಕಗಳ ಅಗತ್ಯವಿದೆ. ಸಂತರು ರಾಜಕೀಯ ಪಕ್ಷ ಗಳ ಒಲೈಕೆಗಾಗಿ ಇರುವವರಲ್ಲ. ಭಾರತ ದೇಶವನ್ನು ಭಯೋತ್ಪಾದಕರಿಂದ ಮುಕ್ತ ಮಾಡಬೇಕಾಗಿದೆ. ಪ್ರಾಣಿ ಹುಲಿಯ ಬದಲು ದನವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು ಎಂದು ತಾನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ವಿಎಚ್ ಪಿ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡುತ್ತಾ, ಬಜರಂಗದಳ ಹುಟ್ಟಿರುವುದೇ ಸಂಘರ್ಷಕ್ಕಾಗಿ. ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಘಟನೆ ಮಂಗಳೂರಿನಲ್ಲಿ ನಡೆದಿದ್ದರೆ ಅದಕ್ಕೆ ತಕ್ಕ ಪ್ರತಿಕಾರ ನೀಡು ತ್ತಿದ್ದೆವು ಎಂದರು.

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೆರವಣಿಗೆಗೆ ಚಾಲನೆ ನೀಡಿದರು. ವಿಎಚ್ ಪಿ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ. ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಆರ್ ಎಸ್ ಎಸ್ ಮಂಗಳೂರು ಪ್ರಾಂತದ ಸಹ ಸಂಘ ಸಂಚಾಲಕ ಸುನೀಲ್ ಆಚಾರ್, ವಿಎಚ್ ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿಯ ಅಧ್ಯಕ್ಷ ಗಿರಿಧರ ಶೆಟ್ಟಿ, ವಿಎಚ್ ಪಿ ಜಿಲ್ಲಾ ಕಾರ್ಯ ದರ್ಶಿ ಶಿವಾನಂದ ಮೆಂಡನ್, ಬಜರಂಗದಳದ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಮೊದಲಾದವರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News