ಅಬ್ದುಲ್ ಖಾದರ್ ದೆಂಜಿಪ್ಪಾಡಿ

Update: 2024-05-07 17:07 GMT

ಮಂಗಳೂರು, ಮೇ 7: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ದೆಂಜಿಪ್ಪಾಡಿ ನಿವಾಸಿ ಅಬ್ದುಲ್ ಖಾದರ್ (85) ಮಂಗಳವಾರ ಸಂಜೆ ನಗರದ ಅತ್ತಾವರದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.

ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ದುಬೈಯಲ್ಲಿ ಸುಮಾರು 30 ವರ್ಷಗಳ ಕಾಲ ಔಷಧ ವಿತರಣಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅವರು ಸಾದ್ ಎಜುಕೇಶನ್ ಟ್ರಸ್ಟ್‌ನಲ್ಲಿ ಸಕ್ರಿಯರಾಗಿದ್ದುಕೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದರು. ಸಮಾಜ ಸೇವಕರೂ ಆಗಿದ್ದ ಅವರು ಹಲವು ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.

ದುಬೈಯಲ್ಲಿದ್ದಾಗ ಸಾಮಾಜಿಕ, ಸಾಂಸ್ಕೃತಿಕ ಸೇವಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿದ್ದು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ಪೋಷಕರಾಗಿದ್ದರು.

ಬುಧವಾರ ಬೆಳಗ್ಗೆ ಬೋಳಾರದಲ್ಲಿ ದಫನ ಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ
ಭೋಜ ಪೂಜಾರಿ