ಮುರಳಿಮೋಹನ ಭಟ್ ಕೊಡಕ್ಕಲ್
Update: 2024-05-13 13:43 GMT
ಕೊಣಾಜೆ: ಉಳ್ಳಾಲ ತಾಲೂಕಿನ ಮುಡಿಪು ಶ್ರೀ ಭಾರತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ, ಶ್ರೀ ಮುಡಿಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಮುರಳಿ ಮೋಹನ ಭಟ್ (69) ಅಲ್ಪಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ಫಜೀರು ಗ್ರಾಮದ ಅರ್ಕಾನ ಭಂಡಾರಮನೆಯ ಸ್ವಗೃಹದಲ್ಲಿ ನಿಧನರಾದರು.
ಮುಡಿಪು ಶ್ರೀ ಭಾರತೀ ಶಾಲೆಯ ಸಂಚಾಲಕರಾಗಿದ್ದ ಕೊಡಕ್ಕಲ್ಲು ವೆಂಕಟ್ರಮಣ ಭಟ್ ಅವರ ಪುತ್ರ ಮುರಳಿಮೋಹನ ಭಟ್ ಅವರು ಮುಡಿಪಿನಲ್ಲಿ ವೆಂಕಟೇಶ್ವರ ಎಣ್ಣೆ ಮತ್ತು ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮುಡಿಪು ಪರಿಸರದ ಧಾರ್ಮಿಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿದ್ದರು. ಈ ಭಾಗದ ಹವ್ಯಕ ಗುರಿಕಾರ ಹಾಗೂ ಪ್ರಗತಿಪರ ಕೃಷಿಕರಾಗಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.