ಸಿರಾಜ್ ಅಡ್ಯಾರ್‌ಕಟ್ಟೆ

Update: 2024-05-14 13:12 GMT

ಮಂಗಳೂರು, ಮೇ 14: ಅಡ್ಯಾರ್‌ಕಟ್ಟೆ ನಿವಾಸಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ಸಿರಾಜ್ ಅಡ್ಯಾರ್ ಕಟ್ಟೆ (45) ಅಸೌಖ್ಯದಿಂದ ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸಿರಾಜ್ ಅವರು ಪತ್ನಿ, ಓರ್ವ ಪುತ್ರ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

ಸಿರಾಜ್ ಅವರು 15 ವರ್ಷಗಳ ಕಾಲ ಅಡ್ಯಾರ್-ಹರೇಕಳ ನಡುವೆ ನದಿಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಜನರನ್ನು ಸುರಕ್ಷಿತವಾಗಿ ದಡ ಸೇರಿಸುವ ಮೂಲಕ ಸ್ಥಳೀಯವಾಗಿ ಜನಪ್ರಿಯತೆ ಗಳಿಸಿದ್ದರು. ನದಿಗೆ ಸೇತುವೆ ನಿರ್ಮಾಣ ಗೊಂಡ ಬಳಿಕ ನಾವಿಕ ವೃತ್ತಿಗೆ ವಿದಾಯ ಹೇಳಿ, ವ್ಯಾಪಾರದತ್ತ ಗಮನ ಹರಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ
ಭೋಜ ಪೂಜಾರಿ