ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಿದೆ, ಹಾಗಾಗಿ ಮನ ಬಂದಂತೆ ಘೋಷಣೆ ಮಾಡುತ್ತಿದ್ದಾರೆ : ಪ್ರಹ್ಲಾದ್ ಜೋಶಿ

Update: 2024-04-06 08:01 GMT

ಹುಬ್ಬಳ್ಳಿ : ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ʼನ್ಯಾಯʼ ಎಂದು ಚುನಾವಣಾ ಪ್ರಣಾಳಿಕೆ ಘೋಷಿಸಿದ್ದಾರೆ. ಆದರೆ, ಇವರು ಯಾವತ್ತೂ ದೇಶಕ್ಕೆ ನ್ಯಾಯ ಕಲ್ಫಿಸಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದಾ ಅವರು, "ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಹಾಗಾಗಿ ಮನ ಬಂದಂತೆ ಏನೆಲ್ಲಾ ಘೋಷಣೆ ಮಾಡುತ್ತಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು.

2004ರಲ್ಲಿ ಕಾಂಗ್ರೆಸ್ ಕೆ ಹಾಥ್ ಘರೀಬ್ ಲೋಗೊಂಕೆ ಸಾಥ್ ಎಂದು ಘೋಡಿಸಿದರು. ಆದರೆ ಏನು ಮಾಡಿದರು? ಎಂದು ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಮಾಡಿದರೇ ಹೊರತು ಬಡವರಿಗೆ ಏನು ಕೊಟ್ಟಿಲ್ಲ. ದೇಶಕ್ಕೆ ಯಾವ ನ್ಯಾಯವನ್ನು ಕೊಟ್ಟಿಲ್ಲ. ಈಗ ನ್ಯಾಯ ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ನ್ಯಾಯ ಘೋಷಣೆ, ಯಾತ್ರೆ ಏನೇ ಮಾಡಿದರು ಈಗ ಜನ ಇವರನ್ನು ನಂಬುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News