ಹುಬ್ಬಳ್ಳಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 3 ಲಕ್ಷಕ್ಕೂ ಅಧಿಕ ನಗದು ವಶ

Update: 2024-03-19 05:48 GMT

ಹುಬ್ಬಳ್ಳಿ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಮೂರುಲಕ್ಷ ಎಂಬತ್ತೆರಡು ಸಾವಿರ ನಗದು ಹಣವನ್ನು ಸುಳ್ಳ ರಸ್ತೆಯ ಚೆಕ್ ಪೋಸ್ಟನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಗುಜರಾತ್ ರಾಜ್ಯದ ನಂಬರ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಚೆಕ್ ಪೋಸ್ಟ್ ಸಿಬ್ಬಂದಿಗಳು ತಪಾಸಣೆ ವೇಳೆ ಹಣ ಸಿಕ್ಕಿದೆ.ಕಿರೇಸೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿರುವಾಗ ಚೆಕ್ ಪೋಸ್ಟನಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ದೊರೆತಿದೆ.

ಸೋಮವಾರ ಸಂಜೆ ‌  ಕಿರೆಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರನ್ನು ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್ ರಂಝಾನ್ ಸಾಬ್   ಕಿಲ್ಲೇದಾರ , ಎಸ್ ಎಸ್ ಟಿ ಹಾಗೂ ಎಫ್ ಎಸ್ ಟಿ 3 ರ  ನಾಗಾ ನಾಯ್ಕ  ಹಾಗೂ ಪೋಲೀಸ್ ಸಿಬ್ಬಂದಿ ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ ಓಂಪ್ರಕಾಶ್ ಎನ್ನುವವರಿಗೆ ಸೇರಿದ್ದ ದಾಖಲೆ ಇರದ 3,82,000/-ರೂಪಾಯಿ ನಗದು ಇರುವುದು ಕಂಡುಬಂದಿದೆ.  ನಿಯಮಾನುಸಾರ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಪೋಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್,ಎ.ಎಸ್.ಐ ಆರ್ ಜಿ ನಾಯ್ಕ, ಎಎಸ್ ಐ ಜಿ.ಸಿ.ಕಡೇಮನಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ  ಜಮಾ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಝರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News