ಹುಬ್ಬಳ್ಳಿ: ಅರ್ಚಕನ ಕೊಲೆ ಪ್ರಕರಣ; ಆರೋಪಿಯ ಬಂಧನ

Update: 2024-07-23 13:00 IST
ಹುಬ್ಬಳ್ಳಿ: ಅರ್ಚಕನ ಕೊಲೆ ಪ್ರಕರಣ; ಆರೋಪಿಯ ಬಂಧನ
  • whatsapp icon

ಹುಬ್ಬಳ್ಳಿ: ಪೂಜಾರಿ ದೇವೇಂದ್ರಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕಮರಿಪೇಟೆ ನಿವಾಸಿ ಸಂತೋಷ್ ಭೋಜಗಾರ ಎಂದು ಗುರುತಿಸಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸ್ ಕಮಿಷನರ್ ರಚಿಸಲಾಗಿದ್ದ ತಂಡ, ಚನ್ನಮ್ಮ ವೃತ್ತದಲ್ಲಿ ಆರೋಪಿಯನ್ನು ಬಂಧಿಸಿದೆ.

ಮೃತ ದೇವೇಂದ್ರಪ್ಪ ಅವರ ಪೂಜೆಯಿಂದ ಸಂತೋಷ್ ಕುಟುಂಬಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಲಾಗಿದ್ದು, ಸಂಬಂಧಿಕರ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಅದೇ ಕಾರಣದಿಂದ ಕೆಲವರು ಮೃತಪಟ್ಟಿದ್ದರು ಅಂತ ನಂಬಿದ್ದ. 2022 ರಲ್ಲಿಯೂ ದೇವೇಂದ್ರಪ್ಪನ ಮೇಲೆ ದಾಳಿ ಮಾಡಿದ್ದ ಆರೋಪಿ ಸಂತೋಷ್‌, ಈಗ ಮತ್ತೊಮ್ಮೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News