ಹುಬ್ಬಳ್ಳಿ: ಯುವಕನ ಹತ್ಯೆ ಪ್ರಕರಣ; ಆರೋಪಿಯ ಬಂಧನ

Update: 2024-02-02 15:28 IST
ಹುಬ್ಬಳ್ಳಿ: ಯುವಕನ ಹತ್ಯೆ ಪ್ರಕರಣ; ಆರೋಪಿಯ ಬಂಧನ

ಆರೋಪಿ ಸೈಯದ್ ಅಝರ್ 

  • whatsapp icon

ಹುಬ್ಬಳ್ಳಿ : ಯುವಕನೊಬ್ಬನನ್ನು ಕೊಲೆ ಮಾಡಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಿಲ್ಲತ್ ನಗರದ ನಿವಾಸಿ ಸೈಯದ್ ಅಝರ್ ಎಂದು ಗುರುತಿಸಲಾಗಿದೆ. ಈತ ತನ್ನ  ಸ್ನೇಹಿತ ವಿಜಯಬಸವ(25) ಎಂಬಾತನಿಗೆ ಪಾರ್ಟಿ ಕೊಡುವುದಾಗಿ ಕರೆದೊಯ್ದು ತಲೆಗೆ ಕಲ್ಲುಹಾಕಿ ಹುಬ್ಬಳ್ಳಿ- ಕಲಘಟಗಿ ರಸ್ತೆಯ ಎಮ್ ಟಿ ಎಸ್ ಮೈದಾನದಲ್ಲಿ ಮಂಗಳವಾರ ಹತ್ಯೆಗೈದಿದ್ದ.

ತನ್ನ ಪತ್ನಿಯ ಜೊತೆಗೆ ಸ್ನೇಹಿತ ವಿಜಯ ಬಸವ ಸುಲುಗೆಯಿಂದ ಇರುತ್ತಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News