ನೇಹಾ ಹತ್ಯೆ ರಾಜಕೀಯ ಅಸ್ತ್ರವಾಗದೆ ಸೂಕ್ತ ತನಿಖೆ ಆಗಲಿ: ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ: ಕೊಲೆಗೀಡಾದ ನೇಹಾ ಹಿರೇಮಠ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಫಕೀರ್ ದಿಂಗಾಲೇಶ್ವರ ಶ್ರೀ, ಈ ಸಾವು ದೇಶವನ್ನು ದುಃಖಕ್ಕೆ ಈಡು ಮಾಡುವಂತಾಗಿದ್ದು, ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಸೂಕ್ತ ತನಿಖೆಯನ್ನು ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾಗೆ ನ್ಯಾಯ ಸಿಗಬೇಕಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಸ್ವಾತಂತ್ರ್ಯ ಸಿಗಬೇಕು. ಬಿಜೆಪಿ ಪಕ್ಷದವರು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವ ನೀಚ ಕೆಲಸ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಾನವೀಯತೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದ್ದು, ಈ ಸಾವನ್ನು ಬಹು ಸಂಖ್ಯಾತ ರಾಜಕಾರಣಿಗಳು ಬಳಕ ಮಾಡಿಕೊಳ್ಳುತ್ತಾರೆಂಬ ನಾಡಿನ ಜನ ಅಂದುಕೊಂಡಿರಲಿಲ್ಲ ಎಂದರು.
ಯಾವುದೇ ಸರ್ಕಾರ ಇರಲಿ ಇಂತಹ ಘಟನೆ ಹಾಗೂ ಕೊಲೆಯನ್ನು ಸಾಮಾನ್ಯವಾಗಿ ತೆಗೆದೆಕೊಳ್ಳಬಾರದು. ಏಕಕಾಲಕ್ಕೆ ಬೆಂಗಳೂರು, ತುಮಕೂರು, ಹುಬ್ಬಳ್ಳಿಯಲ್ಲಿ ಕೊಲೆಗಳು ಆಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಏನು ಮಾಡುತ್ತಿವೆ ಎಂಬ ಪ್ರಶ್ನೆ ಮೂಡಿದೆ ಎಂದು ಹೇಳಿದರು.
ಪ್ರಧಾನಿಯವರ ʼಭೇಟಿ ಬಚಾವೋ..ಬೇಟಿ ಪಡಾವೋʼ ಎಂಬುದು ಅಕ್ಷರಶಃ ಅನುಷ್ಠಾನಕ್ಕೆ ಬರಬೇಕು. ಸರಕಾರವೇ ಮಹಿಳೆಯರ ರಕ್ಷಣೆಗೆ ಪರವಾಣಿಗೆಯ ಆಯುಧ ನೀಡುವಂತೆ ವ್ಯವಸ್ಥೆ ಜಾರಿಗೆ ಬರಬೇಕು. ನೇಹಾ ಘಟನೆಯನ್ನು ಎಲ್ಲರೂ ನಿಂತು ನೋಡಿದರೆ ವಿನಹ ಯಾರು ರಕ್ಷಣೆಗೆ ಬರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ರಕ್ಷಣೆಗೆ ಆಯುಧ ಇಟ್ಟು ಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.