ಧರ್ಮ, ದೇವರು, ಆಧ್ಯಾತ್ಮ ಕುರಿತು ನಾವು ಗರಿಷ್ಠ ತಿಳಿಯಲು ಪ್ರಯತ್ನಿಸಬೇಕು: ಗುರುಪಾದ ಮಹಾಸ್ವಾಮಿ

Update: 2024-09-28 17:34 GMT

ರೋಣ : ಧರ್ಮ, ದೇವರು, ಆಧ್ಯಾತ್ಮ  ಕುರಿತು ನಾವು ಗರಿಷ್ಠ ತಿಳಿಯಲು ಪ್ರಯತ್ನಿಸಬೇಕು ಆಗ ನಮ್ಮ ಸಮಾಜವು ಒಳಿತಿನ ದಿಸೆಯಲ್ಲಿ ಸಾಗುತ್ತದೆ ಎಂದು ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿ ಹೇಳಿದರು.

ಅವರು 18ನೇ ವಾರ್ಡ್ ಕುರುಬಗಲ್ಲಿ ಹಾಗೂ ಶಾಂತಿನಗರ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸೀರತುನ್ನಬಿ (ಸ) ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದರು.

ಮುಖ್ಯ ಅತಿಥಿ, ಖ್ಯಾತ ಪ್ರವಚನಕಾರರಾದ ಲಾಲ ಹುಸೇನ್ ಗಂದಗಲ್ "ಪ್ರವಾದಿಯವರು ಮಾನವ ಸಮೂಹವನ್ನು ಎಲ್ಲಾ ರೀತಿಯಾದಂತಹ ದೌರ್ಜನ್ಯ, ದಬ್ಬಾಳಿಕೆ ಹಾಗೂ ಶೋಷಣೆಗಳಿಂದ ಮುಕ್ತಗೊಳಿಸಿದರು. ಅವರು ಮಾನವ ಕುಲದ ವಿಮೋಚಕರಾಗಿದ್ದಾರೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಜ.ಇ. ಹಿಂದ್ ಕರ್ನಾಟಕ ರಾಜ್ಯ ಜತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ "ಪ್ರವಾದಿ (ಸ) ರವರು ಸಕಲ ಮಾನವರಿಗೆ ಮಾತ್ರವಲ್ಲ ಎಲ್ಲ ಜೀವಿಗಳ ಪಾಲಿಗೂ ಅತ್ಯಂತ ಕರುಣಾಮಯಿಯಾಗಿದ್ದರು‌. ಅವರ ಒಂದೊಂದು ಬೋಧನೆಯನ್ನು ನಮ್ಮ ಜೀವನದಲ್ಲಿ ಪಾಲಿಸಲು ನಾವೆಲ್ಲ ಗರಿಷ್ಠ ಪ್ರಯತ್ನಿಸಬೇಕು" ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ.ಎಂ ಯಲಿಗಾರ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭ ಪ್ರಕಾಶ್ ಬನಕಾರ ಪಿಎಸ್ಐ ರೋಣ, ಬಾವ ಸಾಬ್ ಬೆಟಿಗೇರಿ, ಅಧ್ಯಕ್ಷರು ಅಂಜುಮನ್ ಸಂಸ್ಥೆ, ಬಸಮ್ಮ ಕೊಪ್ಪದ ಪುರಸಭೆ ಸದಸ್ಯರು, ಬಸವರಾಜ ಸುಂಕದ ಮುಂತಾದರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News