ಪ್ರಿಯಕರನಿಂದ ನಿಂದ ಬ್ಲಾಕ್‌ಮೇಲ್ ಆರೋಪ: ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ

Update: 2025-04-21 14:01 IST
ಪ್ರಿಯಕರನಿಂದ ನಿಂದ ಬ್ಲಾಕ್‌ಮೇಲ್ ಆರೋಪ: ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ
  • whatsapp icon

ಗದಗ : ಪ್ರಿಯಕರನ ಬ್ಲಾಕ್‌ಮೇಲ್ ನಿಂದಾಗಿ  ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಗೆ 8 ದಿನ ಬಾಕಿ ಇರುವಾಗಲೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

ಸೈರಾ ಬಾನು ನದಾಫ್‌ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ರವಿವಾರ ಪೋಷಕರು ಮದುವೆ ಸಾಮಗ್ರಿಗಳನ್ನು ತರಲು ಹೋಗಿದ್ದ ಸಂದರ್ಭ, ಸೈರಾಬಾನು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ಐದು ವರ್ಷಗಳಿಂದ ಮೈಲೇರಿ ಎಂಬಾತನನ್ನ ಪ್ರೀತಿ ಮಾಡುತಿದ್ದ ಈಕೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಬಳಿಕ ಮದುವೆಗೆ ಒಪ್ಪಿಕೊಂಡಿದ್ದಳು. ಆದರೆ ಶಿಕ್ಷಕಿಯ ಮದುವೆ ತಯಾರಿ ನೋಡಿ ಲವರ್ ನಿಂದ ಉಪಟಳ ಶುರುವಾಗಿದೆಯಂತೆ. ಇಬ್ಬರ ಫೋಟೋ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕ್ತಿದ್ದ ಅಂತ ಸ್ವತ: ಸೈರಾಬಾನು ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾಳೆ ಎಂದು ಪಾಲಕರು ಆರೋಪಿಸಿದ್ದಾರೆ.  

ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸೈರಾ ಬಾನು, ನ್ಯಾಷನಲ್ ಲೆವೆಲ್ ಕುಸ್ತಿಪಟು ಆಗಿ  ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಳು. ಇಡೀ ಮನೆಯ ಜವಾಬ್ದಾರಿ ಹೊತ್ತು ಸಾಗುತ್ತಿದ್ದ ಸೈರಾಬಾನು ಲವರ್ ಟಾರ್ಚರ್ ಗೆ ಬೇಸತ್ತು ಆತಮಹತ್ಯೆ ಮಾಡಿಕೊಂಡಿದ್ದಾಳೆ

ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News