ಗದಗ: ಸಿಲಿಂಡರ್ ಸ್ಫೋಟಗೊಂಡು ಆರು ಮಂದಿಗೆ ಗಾಯ

ಗದಗ: ಸಿಲಿಂಡರ್ ಸ್ಫೋಟಗೊಂಡು ಆರು ಜನರು ಗಾಯವಾಗಿರುವ ಘಟನೆ ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಆದಿಯವರ ಎನ್ನುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಬಸಪ್ಪ ಅವರ ಮನೆಗೆ ಬೀಗ ಹಾಕಲಾಗಿತ್ತು. ಸಿಲಿಂಡರ್ ಸೋರಿಕೆ ಗಮನಿಸಿ ಅಕ್ಕಪಕ್ಕದ ಮನೆಯವರು ಜಮಾವಣೆಗೊಂಡಿದ್ದಾರೆ.
ಈ ವೇಳೆ ಮನೆಯ ಬೀಗ ಒಡೆಯುತ್ತಿದ್ದಂತೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ 14 ವರ್ಷದ ಶರಣಪ್ಪ ಹಾಲೀನ್, ಲಕ್ಷ್ಮವ್ವ ಕಣವಿ, ಬಸವಣೆವ್ವ ಹೊರಪೇಟಿ, ಮಂಜುಳಾ, ನಿರ್ಮಲಾ ಎಂಬವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡಿದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಮಯಕ್ಕೆ ಸರಿಯಾಗಿ ಬಾರದ ಅಂಬುಲೆನ್ಸ್: ಗ್ರಾಮಸ್ಥರ ಆಕ್ರೋಶ
ಸಿಲಿಂಡರ್ ಸ್ಪೋಟದಿಂದ ಆರು ಮಂದಿ ಗಾಯಗೊಂಡು ನರಳಾಡುತ್ತಿದ್ದರೆ, ಸಕಾಲಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.