ಕಾಡು ಹಂದಿ ದಾಳಿ: ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ; ಗಾಯಾಳುಗೆ ಮಾಸಿಕ 4 ಸಾವಿರ ಘೋಷಿಸಿದ ಸಚಿವ ರಾಜಣ್ಣ
ಹಾಸನ: ಕಾಡು ಹಂದಿ ದಾಳಿಯಿಂದ ಮೃತಪಟ್ಟಿರುವ ರಾಜೇಗೌಡ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಹಾಗೂ ದಾಳಿಯಿಂದ ಗಾಯಕ್ಕೊಳಗಾದವರಿಗೆ ಮಾಸಿಕ 4 ಸಾವಿರ ರೂ. ಪರಿಹಾರವನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಘೋಷಣೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕಾಡುಹಂದಿ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಬ್ಬರೂ ಮಹಿಳೆಯರನ್ನು ಭೇಟಿ ಮಾಡಿ ಸಚಿವರು ಧೈರ್ಯ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಡು ಹಂದಿ ದಾಳಿಯಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 15 ಲಕ್ಷ ಪರಿಹಾರವನ್ನು ನೀಡಲಾಗುವುದು. ಜೊತೆಗೆ ದಾಳಿ ನಡೆದಾಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವುದಲ್ಲದೇ ಮಾಸಿಕವಾಗಿ ನಾಲ್ಕು ಸಾವಿರದವರೆಗೆ ಅರಣ್ಯ ಇಲಾಖೆಯಿಂದಲೇ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅರಣ್ಯಾಧಿಕಾರಿ ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.