ಹಾಸನ | ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ
Update: 2025-01-04 17:48 GMT
ಹಾಸನ : ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರ ತಂಡ ಶನಿವಾರ ದಾಳಿ ನಡೆಸಿದ್ದು, ಇಲಾಖೆಯ ಸೂಪರಿಂಟೆಂಡೆಂಟ್ ವೇಣುಗೋಪಾಲ್ ಅವರು ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವರ್ಗಾವಣೆಗೆ 40 ಸಾವಿ ರೂ. ಲಂಚದ ಬೇಡಿಕೆ:
ವೇಣುಗೋಪಾಲ್ ಅವರು ಇಲಾಖೆ ಸಿಬ್ಬಂದಿಯಿಂದ ವರ್ಗಾವಣೆಗೆ ಸಂಬಂಧಿಸಿದಂತೆ 40 ಸಾವಿ ರೂ. ಲಂಚವನ್ನು ಕೇಳಿದ್ದರು. ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ವೇಣುಗೋಪಾಲ್ ರನ್ನು ಹಿಡಿದಿದ್ದಾರೆ.
ಲಂಚದ ಹಣದೊಂದಿಗೆ ಬಲೆಗೆ:
ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ವೇಣುಗೋಪಾಲ್ ಅವರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಸಿಪಿಐ ಶಿಲ್ಪಾ ಮತ್ತು ಬಾಲು ಅವರ ನೇತೃತ್ವದ ತಂಡ ದಾಳಿ ನಡೆಸಿದೆ.