ಬಂಕಾಪುರ: ಇಸ್ಪೀಟ್ ಅಡ್ಡೆಗೆ ಪೊಲೀಸರಿಂದ ದಾಳಿ; ಮೂವರ ಬಂಧನ
Update: 2025-04-12 23:11 IST

ಬಂಕಾಪುರ: ಪೊಲೀಸರು ಇಸ್ಪೀಟ್ ಅಡ್ಡೆಯೊಂದಕ್ಕೆ ದಾಳಿ ನಡೆಸಿ ಜೂಜಾಟವಾಡುತ್ತಿದ್ದ ಅಂತರ ಜಿಲ್ಲಾ ಇಸ್ಪೀಟ್ ಜೂಜುಕೋರರನ್ನು ಬಂಧಿಸಿದ್ದಾರೆ.
ಈಶ್ವರ, ಮಂಜುನಾಥ ಮತ್ತು ಸಂಜೀವ ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮೊಬೈಲ್, ಕಾರುಗಳ ಸಹಿತ ಒಟ್ಟು 10,41,950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಕಬಸರಿಕಟ್ಟಿ ಗ್ರಾಮದ ಶಿಡ್ಲಾಪೂರ ರಸ್ತೆಯ ಬಳಿ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಸಿಪಿಐ ಅನಿಲ್ ಕುಮಾರ್ ರಾಠೋಡ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.