ಹುಬ್ಬಳ್ಳಿ | ಅಂಜುಮನ್ ಸಂಸ್ಥೆ ಚುನಾವಣೆ : ಮಾಜಿ ಸಚಿವ ಎ.ಎಂ ಹಿಂಡಸಗೇರಿ ಗುಂಪಿಗೆ ಭರ್ಜರಿ ಜಯ

Update: 2024-02-19 12:08 GMT

ಹುಬ್ಬಳ್ಳಿ : ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಗುಂಪು ಭರ್ಜರಿ ಗೆಲುವು ಸಾಧಿಸಿದೆ.

ನಾಲ್ಕು ಬಣಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಹಿಂಡಸಗೇರಿ ಗುಂಪಿನ ಎಲ್ಲ 52 ಉಮೇದುವಾರರು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ನಡೆದು ಬಳಿಕ ಫಲಿತಾಂಶ ಘೋಷಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಂಡಸಗೇರಿಯವರು 3789 ಮತ ಪಡೆಯುವ ಮೂಲಕ ಆಯ್ಕೆಯಾದರೆ, ಹೊನ್ನಳ್ಳಿ ಗುಂಪಿನ ಎನ್.ಡಿ.ಗದಗಕರ 1899 ಮತ ಪಡೆದರು. ಇದುವರೆಗೆ ಅಧ್ಯಕ್ಷರಾಗಿದ್ದ ಮುಹಮ್ಮದ್ ಯೂಸುಫ್ ಸವಣೂರಗೆ 1225 ಮತ ಬಂದರೆ, ಮಜರಖಾನ 1128 ಮತ ಪಡೆದರು.

ಉಪಾಧ್ಯಕ್ಷರಾಗಿ ಹಿಂಡಸಗೇರಿ ಗುಂಪಿನ ಎ.ಎ.ಅತ್ತಾರ 3602 ಮತ ಪಡೆದು ಆಯ್ಕೆಯಾದರೆ, ಹೊನ್ನಳ್ಳಿ ಗುಂಪಿನ ವಹಾಬ್ ಮುಲ್ಲಾ 2068 ಮತ ಪಡೆದು ದ್ವಿತೀಯ ಸ್ಥಾನ ಪಡೆದರು.

ಕಾರ್ಯದರ್ಶಿಯಾಗಿ ಬಶೀ ಹಳ್ಳೂರ 3544 ಮತ ಪಡೆದು ಆಯ್ಕೆಯಾದರೆ, ಮುಹಮ್ಮದ್ ಆರೀಫ್ ಮುಜಾವರ 2139 ಮತ ಪಡೆದರು.‌ ಖಜಾಂಚಿಯಾಗಿ ದಾದಾ ಹಯಾತ್ ಖೈರಾತಿ 3609 ಮತ ಪಡೆದರೆ, ನಾಸೀರ್ ಅಸುಂಡಿ 2206 ಮತ ಪಡೆದರು. ಜಂಟಿ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್‌ ಬಂಕಾಪುರ 3636 ಮತ ಪಡೆದು ಚುನಾಯಿತರಾದರೆ, ಗೈಬು ಸಾಬ ಹೊನ್ಯಾಳ 2066 , ಅಲ್ಲದೇ ಅಸ್ಪತ್ರೆ ಮಂಡಳಿ ಕಾರ್ಯದರ್ಶಿಯಾಗಿ ಮುಹಮ್ಮದ್ ಇರ್ಷಾದ್ ಬಳ್ಳಾರಿ 3604 ಮತದೊಂದಿಗೆ ಗೆಲುವು ಸಾಧಿಸಿದರೆ, ಹೊನ್ನಳ್ಳಿ ಗುಂಪಿನ ಆಸೀಫ್ ಬಳ್ಳಾರಿ 1919 ಮತ ಪಡೆದರು.

ಶಿಕ್ಷಣ ಸಮಿತಿಗೆ ಮುಹಮ್ಮದ್ ಇಲ್ಯಾಸ್ ಮನಿಯಾರ್, ಬಶೀರ್ ಗೂಡಮಾಲ್,‌ ನವೀದ್ ಮುಲ್ಲಾ, ಸಲೀಮ್ ಸುಂಡಕೆ,‌ ಮುಹಮ್ಮದ್ ಕೋಳೂರ, ರಿಯಾಝ್ ಅಹ್ಮದ್ ಖತೀಬ, ಶಂಶೇರ ನಾಯಕವಾಡಿ , ಆಸ್ಪತ್ರೆ ಮಂಡಳಿಗೆ ಸಿರಾಜ್ ಅಹ್ಮದ್ ಕುಡಚಿವಾಲೆ, ಜಹೀರ್ ಅಬ್ಬಾಸ್ ಯರಗಟ್ಟಿ, ಫಾರೂಕ್ ಅಬ್ಬುನವರ, ದಾವೂದ್ ನದಾಫ್ ಆಯ್ಕೆಯಾದರು.

10 ಪೋಷಕ ಸದಸ್ಯರಾಗಿ ಅಬ್ದುಲ್ ಕರೀಂ ಮಿಶ್ರಿಕೋಟಿ,‌ ಮುಹಮ್ಮದ್ ಅಖ್ತರ್ ಲಗದಗ,‌ ರಿಯಾಝ್ ಅಹ್ಮದ್ ಸೌದಾಗರ, ಮೆಹಬೂಬಸಾಬ ಕಾಟೇವಾಡಿ, ನಿಸಾರ್ ಪಲ್ಲಾನ, ಫಾರೂಕ್ ಕಾಲೇಬುಡ್ಡೆ,‌ ನಝೀರ್ ಚುಲ್ ಬುಲ್ ,‌ ಮುಹಮ್ಮದ್ ಇಕ್ಬಾಲ್ ಕೊಂಗಾರ,‌ ಮುಸ್ತಾಕ್ ಮುನ್ಷಿ, ಜಾವೇದ್ ಕಿತ್ತೂರು, 25 ಅಜೀವ ಸದಸ್ಯರಾಗಿ ಮುಹಮ್ಮದ್ ಸಾಜೀದ್ ಗುಬ್ಬಿ, ದಾದಾಹಯಾತ ಬೇಪಾರಿ, ಅಬ್ದುಲ್ ಸಮದ್ ಜಮಖಾನೆ,‌ ನಿಸಾರ್ ಧಾರವಾಡ,‌ ನಿಸಾರ್ ನೀಲಗಾರ,‌ ಮುಹಮ್ಮದ್ ಗೌಸ್ ಕಟ್ಟಿಮನಿ, ನೂರ್ ಅಹ್ಮದ್ ಬಿಜಾಪುರ,‌ ಮುಷ್ತಾಕ್ ಬ್ಯಾಳಿ, ಅಸ್ಗ‌ರ್ ಅಲಿ ಹೆಬ್ಬಳ್ಳಿ, ಅಬ್ದುಲ್ ಶುಕೂರ್ ಸರಗಿರೊ, ಹುಸೇನ್ ಐನಾಪುರಿ, ಮುಹಮ್ಮದ್ ಗೌಸ್ ಮಂಚನಕೊಪ್ಪ, ಅಸೀಫ್ ಲೋಕಾಪಲ್ಲಿ,‌ ಮೋದಿನಸಾಬ ಬೆಟಗೇರಿ, ಮುಹಮ್ಮದ್ ಸಾಧಿಕ್ ಬ್ಯಾಹಟ್ಟಿ, ಮುಹಮ್ಮದ್ ಗೌಸ್ ಚೌದರಿ,‌ ಮುಹಮ್ಮದ್ ಹನೀಫ್ ಅಧೋನಿ,‌ ಜಹೀರ್ ಹಕೀಮ,‌ ನಾಸೀರ್ ಹುಸೇನ್ ಮಾಣಿಕ್,‌ ದಾವಲಸಾಬ ನಧಾಪ್, ಇಮ್ತಿಯಾಝ್ ನಾಯಕವಾಡಿ,‌ ಶುಐಬ್ ಮುದ್ದೇಬಿಹಾಳ, ಹಝ್ರತ್ ಬೇಪಾರಿ,‌ ಮುಹಮ್ಮದ್ ರಫೀಕ್ ನಧಾಫ್, ರಾಜೇಸಾಬ ಬೀಳಗಿ ಇವರುಗಳು ಆಯ್ಕೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ  ಯುಸೂಫ್ ಸವಣೂರ ಬಣ ಬೆಂಬಲಿಸಿದ್ದ ಮಹಾನಗರ‌ ಪಾಲಿಕೆ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಈ ಬಾರಿ ಹಿಂಡಸಗೇರಿ ಗುಂಪಿನೊಂದಿಗೆ ಗುರುತಿಸಿಕೊಂಡು ನಿರ್ಣಾಯಕ ಪಾತ್ರ ವಹಿಸಿದರು.

ಅಂಜುಮನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿಂಡಸಗೇರಿಯವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ ಸಂಸ್ಥೆಗೆ ದೊಡ್ಡ ಇತಿಹಾಸವಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಹಾರೈಸಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರುಗಳು ಹಿಂಡಸಗೇರಿ ಹಾಗೂ ತಂಡವನ್ನು ಅಭಿನಂದಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News