ಟರ್ಕಿ | ಸ್ಫೋಟಕ ಘಟಕದಲ್ಲಿ ಪ್ರಬಲ ಸ್ಫೋಟ ; 12 ಮೃತ್ಯು

Update: 2024-12-24 16:04 GMT

ಸಾಂದರ್ಭಿಕ ಚಿತ್ರ

ಅಂಕಾರ : ಟರ್ಕಿಯ ಕರೆಸಿ ಜಿಲ್ಲೆಯಲ್ಲಿ ಸ್ಫೋಟಕ ಘಟಕದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬಾಲಿಕೆಸಿರ್ ಪ್ರಾಂತದ ಸ್ಫೋಟಕ ಘಟಕದಲ್ಲಿ ಮಂಗಳವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು ಘಟಕದ ಒಂದು ಭಾಗ ಕುಸಿದು ಬಿದ್ದಿದೆ. ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು ಇತರ 4 ಮಂದಿ ಗಾಯಗೊಂಡಿದ್ದಾರೆ.

ಸಮೀಪದ ಕೆಲವು ಕಟ್ಟಡಗಳಿಗೂ ಅಲ್ಪಪ್ರಮಾಣದ ಹಾನಿಯಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಫೋಟ ನಡೆದ ಸಂದರ್ಭ ಫ್ಯಾಕ್ಟರಿಯಲ್ಲಿ 12 ಮಂದಿ ಸಿಬ್ಬಂದಿಗಳಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಂಡಿದ್ದಾರೆ. ಸ್ಫೋಟದ ಬಳಿಕ ಹತ್ತಿಕೊಂಡ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News