ಪರಮಾಣು ಸ್ಥಾವರ ಭ್ರಷ್ಟಾಚಾರದಲ್ಲಿ ಶೇಖ್ ಹಸೀನಾ ಭಾಗಿ: ಸಮಿತಿ ಆರೋಪ
Update: 2024-12-23 16:47 GMT
ಢಾಕಾ: ರಶ್ಯನ್ ಮತ್ತು ಭಾರತೀಯ ಸಂಸ್ಥೆಗಳು ನಿರ್ಮಿಸುತ್ತಿರುವ ರೂಪ್ಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು ಇದರಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಪುತ್ರ ಸಜೀಬ್ ಅಹ್ಮದ್ ಭಾಗಿಯಾಗಿದ್ದಾರೆ ಎಂದು ಬಾಂಗ್ಲಾದೇಶದ ಭ್ರಷ್ಟಾಚಾರ ವಿರೋಧಿ ಆಯೋಗ ಆರೋಪಿಸಿದ್ದು ಈ ಕುರಿತ ತನಿಖೆಗೆ ಚಾಲನೆ ನೀಡಿದೆ.
ಯೋಜನೆಯಲ್ಲಿ ಬೃಹತ್ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆದಿರುವುದಾಗಿ ಸಾರ್ವಜನಿಕ ವಲಯದಿಂದ ಮಾಹಿತಿ ಲಭಿಸಿದೆ. ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದಿಂದ ಹಸೀನಾ, ಸಜೀಬ್ ಅಹ್ಮದ್, ಹಸೀನಾ ಅವರ ಸೊಸೆ ಟುಲಿಪ್ ಸಿದ್ದಿಕ್(ಬ್ರಿಟನ್‍ನ ಹಣಕಾಸು ಸಚಿವೆ) 5 ಶತಕೋಟಿ ಡಾಲರ್ ಹಣವನ್ನು, ಮಲೇಶ್ಯಾದ ಬ್ಯಾಂಕ್ ಖಾತೆಗಳ ಮೂಲಕ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಬಗ್ಗೆ ಅಧಿಕಾರಿಗಳ ವಿಶೇಷ ತಂಡ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.