ರಕ್ಷಣೆ, ಸೌರ ಶಕ್ತಿ ಕ್ಷೇತ್ರದಲ್ಲಿ ಭಾರತ-ಕುವೈತ್ ಮಹತ್ವದ ಒಪ್ಪಂದ

Update: 2024-12-22 16:35 GMT

  ನರೇಂದ್ರ ಮೋದಿ  , ಕುವೈತ್ ಅಮೀರ್ ಶೇಕ್ ಮಿಶಾಲ್ ಅಲ್ ಅಹ್ಮದ್ ಅಲ್ ಜಾಬೇರ್ ಅಲ್ ಸಬಾ | PC : PTI/AP

ಕುವೈತ್ ಸಿಟಿ: ಭಾರತ ಹಾಗೂ ಕುವೈತ್ ನಡುವೆ ರಕ್ಷಣಾ ವಲಯದಲ್ಲಿ ಮೈಲುಗಲ್ಲಾಗಲಿರುವ ತಿಳುವಳಿಕಾ ಒಪ್ಪಂದ, ಕುವೈತ್ ಅಂತರ ರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ)ಕ್ಕೆ ಸೇರ್ಪಡೆ, ಕಲೆ, ಸಂಸ್ಕೃತಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿನಿಮಯ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಕುವೈತ್ ಭೇಟಿಯ ಪ್ರಮುಖ ಫಲಿತಾಂಶವಾಗಿದೆ.

ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಆಯಾಮ ನೀಡುವುದನ್ನು ಕೇಂದ್ರವಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್ ಅಮೀರ್ ಶೇಕ್ ಮಿಶಾಲ್ ಅಲ್ ಅಹ್ಮದ್ ಅಲ್ ಜಾಬೇರ್ ಅಲ್ ಸಬಾ ಅವರೊಂದಿಗೆ ಮಾತುಕತೆ ನಡೆಸಿದರು. ಅನಂತರ ಉಭಯ ದೇಶಗಳು ತಮ್ಮ ನಡುವಿನ ವ್ಯೆಹಾತ್ಮಕ ಪಾಲುದಾರಿಕೆಯನ್ನು ಉನ್ನತೀಕರಿಸುವ ನಿಧಾರ್ರವನ್ನು ಕೈಗೊಂಡವು.

ಪತ್ರಿಕಾ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತ ಹಾಗೂ ಕುವೈತ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ರಕ್ಷಣಾ ವಲಯದಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಸಾಂಸ್ಥೀಕರಣಗೊಳಿಸುತ್ತದೆ ಎಂದು ಹೇಳಿದೆ.

ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ತರಬೇತು, ವ್ಯಕ್ತಿ ಹಾಗೂ ತಜ್ಞರ ವಿನಿಮಯ, ಜಂಟಿ ಸಮರಾಭ್ಯಾಸ, ರಕ್ಷಣಾ ಉದ್ಯಮದಲ್ಲಿ ಸಹಕಾರ, ರಕ್ಷಣಾ ಉಪಕರಣಗಳ ಪೂರೈಕೆ, ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಸಹಯೋಗ ಹಾಗೂ ಇತರ ಅಂಶಗಳನ್ನು ಒಳಗೊಂಡಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಕುವೈತ್ ಈಗ ಐಎಸ್‌ಎಯ ಸದಸ್ಯ ಎಂದು ಕೂಡ ಅದು ಘೋಷಿಸಿತು. ಐಎಸ್‌ಎ ಒಟ್ಟಾರೆ ಸೌರ ಶಕ್ತಿಯ ನಿಯೋಜನೆಯನ್ನು ಒಳಗೊಳ್ಳುತ್ತದೆ ಹಾಗೂ ಕಡಿಮೆ ಕಾರ್ಬನ್ ಬೆಳವಣಿಗೆ ಪಥಗಳನ್ನು ಅಭಿವೃದ್ಧಿ ಪಡಿಸಲು ಸದಸ್ಯ ರಾಷ್ಟ್ರಗಳಿಗೆ ನೆರವು ನೀಡಲು ಸೌರ ಶಕ್ತಿಯನ್ನು ಬಳಸುವುದನ್ನು ಹೆಚ್ಚಿಸುವಲ್ಲಿ ಇರುವ ಪ್ರಮುಖ ಸಾಮಾನ್ಯ ಸವಾಲಗಳನ್ನು ಪರಿಹರಿಸುತ್ತದೆ

ಇಲ್ಲಿನ ಭವ್ಯ ಬಯಾನ್ ಅರಮನೆಯಲ್ಲಿ ನಡೆದ ಸಭೆಯಲ್ಲಿ ಉಭಯ ದೇಶಗಳ ನಾಯಕರು ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ, ಔಷಧ, ಫಿನ್‌ಟೆಕ್, ಮೂಲಭೂತ ಸೌಕರ್ಯ ಹಾಗೂ ಭದ್ರತೆಯ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು.

ಕುವೈತ್‌ನಲ್ಲಿ 10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇರುವ ಭಾರತಿಯರ ಯೋಗಕ್ಷೇಮಕ್ಕೆ ಒತ್ತು ನೀಡಿರುವ ಅಮೀರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು. ಗಲ್ಫ್ ರಾಷ್ಟ್ರದ ಅಭಿವೃದ್ಧಿ ಯಾನದಲ್ಲಿ ಭಾರತೀಯ ಸಮುದಾಯ ನೀಡಿರುವ ಕೊಡುಗೆಗೆ ಕುವೈತ್ ನಾಯಕ ಪ್ರಶಂಸೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News