ಬೇಹುಗಾರಿಕೆ ಪ್ರಕರಣ | ಅಮೆರಿಕ ಪ್ರಜೆಗೆ 15 ವರ್ಷ ಜೈಲುಶಿಕ್ಷೆ ವಿಧಿಸಿದ ರಶ್ಯ
Update: 2024-12-24 16:23 GMT
ಮಾಸ್ಕೋ : ಬೇಹುಗಾರಿಕೆ ನಡೆಸಿದ್ದಕ್ಕಾಗಿ ಅಮೆರಿಕದ ಪ್ರಜೆ ಯೂಜಿನ್ ಸ್ಪೆಕ್ಟರ್ ಗೆ ರಶ್ಯದ ನ್ಯಾಯಾಲಯ 15 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಸರಕಾರಿ ಸ್ವಾಮ್ಯದ ಆರ್‍ಐಎ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ರಶ್ಯದಲ್ಲಿ ಜನಿಸಿ ಬಳಿಕ ಅಮೆರಿಕದಲ್ಲಿ ನೆಲೆಸಿದ್ದ ಸ್ಪೆಕ್ಟರ್ ರಶ್ಯದ ಮಾಜಿ ಪ್ರಧಾನಿಯೊಬ್ಬರ ಸಹಾಯಕನಿಗೆ ಲಂಚ ನೀಡಿದ ಪ್ರಕರಣದಲ್ಲಿ ರಶ್ಯದಲ್ಲಿ ಮೂರೂವರೆ ವರ್ಷ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಔಷಧ ಸಂಸ್ಥೆಯೊಂದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು 2021ರಲ್ಲಿ ಬಂಧಿಸಲಾಗಿದ್ದು ಕಳೆದ ಆಗಸ್ಟ್ ನಲ್ಲಿ ಬೇಹುಗಾರಿಕೆ ಆರೋಪ ದಾಖಲಿಸಲಾಗಿತ್ತು.