ಗಾಝಾ: 4 ಇಸ್ರೇಲ್ ಯೋಧರ ಮೃತ್ಯು

Update: 2024-01-09 17:39 GMT

Image Source : PTI

ಟೆಲ್ಅವೀವ್: ಗಾಝಾ ಪಟ್ಟಿಯಲ್ಲಿ ನಡೆದ ಹೋರಾಟದಲ್ಲಿ ತನ್ನ 4 ಯೋಧರು ಸಾವನ್ನಪ್ಪಿದ್ದು, ಇತರ 4 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮಂಗಳವಾರ ಹೇಳಿದೆ.

ಇದರೊಂದಿಗೆ ಗಾಝಾ ಸಂಘರ್ಷದಲ್ಲಿ ಮೃತಪಟ್ಟ ಪದಾತಿ ದಳದ ಯೋಧರ ಸಂಖ್ಯೆ 180ಕ್ಕೆ ಏರಿದೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಗಾಝಾದಲ್ಲಿ ಇನ್ನೂ ಒತ್ತೆಯಾಳಾಗಿ ಇರುವವರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲು ಇಸ್ರೇಲ್ನ ನಿಯೋಗ ಕೈರೊಗೆ ಆಗಮಿಸಿದೆ ಎಂದು ಈಜಿಪ್ಟ್ ಮಾಧ್ಯಮಗಳು ವರದಿ ಮಾಡಿವೆ.    

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News