ಮುಂದಿನ ವಾರ ಮೋದಿ-ಟ್ರಂಪ್ ಭೇಟಿ?

Update: 2024-09-18 02:43 GMT

PC: x.com/business

ವಾಷಿಂಗ್ಟನ್: ಮುಂದಿನ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವುದಾಗಿ ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಮಿಚಿಗನ್ ನ ಫ್ಲಿಂಟ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಈ ಹೇಳಿಕೆ ನೀಡಿದ ಟ್ರಂಪ್, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧವನ್ನು ಉಲ್ಲೇಖಿಸಿದರು. ಉಭಯ ನಾಯಕರು ಎಲ್ಲಿ ಭೇಟಿ ಮಾಡುತ್ತಾರೆ ಎಂಬ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ.

ಈ ತಿಂಗಳ 21 ರಿಂದ 23ರವೆಗೆ ಮೋದಿ ಅಮೆರಿಕ ಪ್ರವಾಸ ಕಾರ್ಯಕ್ರಮವಿದ್ದು, ಈ ವೇಳೆ ಟ್ರಂಪ್ ಕೂಡಾ ಭೇಟಿಯಾಗುವ ನಿರೀಕ್ಷೆ ಇದೆ. ಮೋದಿಯವರ ಅಮೆರಿಕ ಪ್ರವಾಸದ ವೇಳಾಪಟ್ಟಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದೆ.

ಟ್ರಂಪ್ ಅಧಿಕಾರಾವಧಿಯಲ್ಲಿ ಟ್ರಂಪ್ ಹಾಗೂ ನರೇಂದ್ರ ಮೋದಿ ಗಾಢ ಬಾಂಧವ್ಯ ಹೊಂದಿದ್ದರು. ಹೂಸ್ಟನ್ ನಲ್ಲಿ ಟ್ರಂಪ್ ಆಯೋಜಿಸಿದ್ದ ಹೌಡಿ ಮೋದಿ ಹಾಗೂ ಭಾರತದಲ್ಲಿ ಮೋದಿ ಆಯೋಜಿಸಿದ್ದ ನಮಸ್ತೇ ಟ್ರಂಪ್ ಕಾರ್ಯಕ್ರಮ ಇದಕ್ಕೆ ಸಾಕ್ಷಿ.

ರಕ್ಷಣೆ ಮತ್ತು ಆಯಕಟ್ಟಿನ ಸಹಕಾರ ವಿಚಾರದಲ್ಲಿ ಉಭಯ ದೇಶಗಳ ನಡುವೆ ಸೌಹಾರ್ದಯುತ ಸಂಬಂಧವಿದ್ದು, ಹೆಚ್ಚುತ್ತಿರುವ ಚೀನಾ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಉಭಯ ಗಣ್ಯರು ಗಮನ ಹರಿಸಿದ್ದಾರೆ. ಕೆಲ ಅಪರೂಪದ ವ್ಯಾಪಾರ ವ್ಯಾಜ್ಯಗಳ ಹೊರತಾಗಿಯೂ ಪಾಲುದಾರಿಕೆ ಪ್ರಬಲವಾಗಿ ಉಳಿದಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News