ಹಿಜ್ಬುಲ್ಲಾ ಡ್ರೋನ್ ದಾಳಿ: ಇಸ್ರೇಲ್ ನ ನಾಲ್ವರು ಸೈನಿಕರು ಮೃತ್ಯು

Update: 2024-10-14 09:57 GMT

ಸಾಂದರ್ಭಿಕ ಚಿತ್ರ (PTI)

ಟೆಲ್ ಅವೀವ್: ಮಧ್ಯ ಇಸ್ರೇಲ್‌ನ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸೈನಿಕರು ಮೃತಪಟ್ಟು ಮತ್ತು ಏಳು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.

ಕಳೆದ ಗುರುವಾರ ಅ.10ರಂದು ಲೆಬೆನಾನ್ ನ ಬೈರುತ್ ನಗರದ ಮೇಲೆ ದಾಳಿ ನಡೆಸಿ 22 ಜನರ ಹತ್ಯೆಗೈದ ಇಸ್ರೇಲ್ ಪಡೆಯ ಮೇಲಿನ ಪ್ರತಿಕಾರವಾಗಿ ಬಿನ್ಯಾಮಿನಾ ನಗರದ ಮೇಲೆ ಈ ದಾಳಿ ನಡೆದಿದೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.

ಗಾಝಾದಲ್ಲಿ ಎರಡು ಸ್ಥಳೀಯ ಆಸ್ಪತ್ರೆಗಳ ಪ್ರಕಾರ, ರವಿವಾರ ರಾತ್ರಿ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News