ಕಲಬುರಗಿ | ಗಾಳಿಪಟ ಹಾರಿಸುತ್ತಿದ್ದ ವೇಳೆ ಮಾಳಿಗೆಯಿಂದ ಬಿದ್ದು ಬಾಲಕ ಮೃತ್ಯು
Update: 2025-01-16 06:26 GMT
ಕಲಬುರಗಿ : ಮನೆಯ ಮಾಳಿಗೆಯ ಮೇಲೆ ನಿಂತುಕೊಂಡು ಗಾಳಿಪಟ ಹಾರಿಸುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕಮಲಾಪುರ ತಾಲ್ಲೂಕಿನ ನವನಿಹಾಳ ಖೀರುನಾಯಕ ತಾಂಡಾದ ನಿವಾಸಿ ಆದಿತ್ಯ ಗಜಾನಂದ ಜಾಧವ (15) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಆದಿತ್ಯ ಬುಧವಾರ ಮಾಳಿಗೆ ಮೇಲೆ ಹತ್ತಿ ಗಾಳಿಪಟ ಹಾರಿಸುತ್ತಿದ್ದ. ಆಯತಪ್ಪಿ ಮೇಲಿಂದ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಕೂಡಲೇ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಆದಿತ್ಯ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆದಿತ್ಯ ಕಮಲಾಪುರ ಪಟ್ಟಣದ ಖಾಸಗಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.