ಕಲಬುರಗಿ | ಅಪ್ರಾಪ್ತ ಬಾಲಕಿ ಆತ್ಮಹತ್ಯೆ; ವಿವಿಧ ಸಂಘಟನೆಗಳಿಂದ ಜೇವರ್ಗಿ ಬಂದ್
ಕಲಬುರಗಿ : ಜೇವರ್ಗಿ ಪಟ್ಟಣದಲ್ಲಿ ಇತ್ತೀಚೆಗೆ ಯುವಕನೊಬ್ಬನ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಖಂಡಿಸಿ ಗುರುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳು ಜೇವರ್ಗಿ ಬಂದ್‌ಗೆ ಕರೆ ನೀಡಿವೆ.
ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಬಂದ್ ಆಚರಣೆ ಶುರುವಾಗಿದ್ದು, ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಅಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚಾರ ಇಲ್ಲದೆ ಬೇಕೋ ಎನ್ನುತ್ತಿವೆ. ಮುಖ್ಯ ರಸ್ತೆಯಲ್ಲಿ ಇರುವ ಅಂಗಡಿ ಮುಂಗಟ್ಟುಗಳು ಸಹ ವ್ಯಾಪಾರಿಗಳು ಮುಚ್ಚುವ ಮೂಲಕ ಬಂದ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆಯೇ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಎಂದು ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾದ ಆರೋಪಿ ಮಾಹಿಬೂಬ್ ಎಂಬಾತನ್ನು ಕೇವಲ ಬಂಧಿಸಿದರೆ ಸಾಲದು, ಕಠಿಣ ಶಿಕ್ಷೆ ನೀಡಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಭಾರತೀಯ ಜನತಾ ಪಕ್ಷ, ವಿವಿಧ ಸಂಘಟನೆಗಳು ಸೇರಿ ತಾಲೂಕಿನ ಸಾರ್ವಜನಿಕರು ಸಹ ಜೇವರ್ಗಿ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ, ವೀರಶೈವ ಲಿಂಗಾಯತ ಮಹಾ ಸಭಾ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು, ಬಸವರಾಜ ಪಾಟೀಲ ನರಿಬೋಳ, ಷಣ್ಮುಖಪ್ಪ ಹಿರೇಗೌಡ, ಶರಣಬಸವ ಕಲ್ಲಾ, ರವಿ ಕೊಳಕೂರ, ಗುರುಗೌಡ ಮಾಲಿಪಾಟೀಲ, ಸಂಗನಗೌಡ ರದ್ದೇವಾಡಗಿ, ಭೀಮರಾಯ ನಗನೂರ್, ರವಿ ಕುಳಗೇರಿ, ಸಿದ್ದು ಕೆರೂರ್, ಮೋಹಿನುದ್ದಿನ್ ಇನಾಮಧಾರ, ಗುರುಲಿಂಗಯ್ಯ ಯನಗುಂಟಿ, ಮಲ್ಲಿಕಾರ್ಜುನ ಬಿರಾದಾರ, ಭಗವಂತರಾಯ ಶಿವಣ್ಣೋರು, ಸೋಮಶೇಖರ ಪಾಟೀಲ ಗುಡೂರ, ಸಂಗನಗೌಡ ಪಾಟೀಲಸಿದ್ದು ಮದರಿ, ಬಿ.ಎಚ್.ಮಾಲಿಪಾಟೀಲ, ಅಖಂಡು ಶಿವಣ್ಣಿ, ಅಖಂಡು ಹಿರೇಗೌಡ, ಅಬ್ದುಲ್ ರೌಫ್ ಹವಾಲ್ದಾರ, ರಹೇಮಾನ ಪಟೇಲ್, ಈಶ್ವರ ಹಿಪ್ಪರಗಿ, ಮಲ್ಲಿಕಾರ್ಜುನ ಅಡ್ವಾನಿ, ಬೆಣ್ಣೆಪ್ಪ ಕೊಂಬಿನ, ನಾಗರಾಜ್ ಓಂ, ಬಸವರಾಜ ಸೂಗೂರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.