ಕಲಬುರಗಿ | ಬೈಕ್-ಗೂಡ್ಸ್ ಆಟೋ ಢಿಕ್ಕಿ : ಸ್ಥಳದಲ್ಲೇ ಇಬ್ಬರು ಮೃತ್ಯು
Update: 2025-01-16 14:14 GMT
ಕಲಬುರಗಿ : ಬೈಕ್ ಮತ್ತು ಗೂಡ್ಸ್ ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಅಫಜಲ್‌ಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ನಡೆದಿದೆ.
ಬೈಕ್ ಸವಾರ ಶಿವಕುಮಾರ್ (19), ಗೂಡ್ಸ್ ಆಟೋದಲ್ಲಿನ ಹಸನಸಾಬ್ (70) ಸ್ಥಳದಲ್ಲೇ ಮೃತಪಟ್ಟಿರುವವರು ಎಂದು ಗುರುತಿಸಲಾಗಿದೆ. ಮೃತರು ಅಫಜಲ್‌ಪುರ ತಾಲ್ಲೂಕಿನ ಶಿರವಾಳ ಮತ್ತು ಅಳ್ಳಗಿ ಗ್ರಾಮದವರು ಎಂದು ತಿಳಿದುಬಂದಿದೆ.
ಬೈಕ್ ಢಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್ ಆಟೋ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.