ಪುರುಷರಿಗೆ ಬಸ್ ದರ ಏರಿಕೆ ಸರಿಯಲ್ಲ : ಕಲಬುರಗಿ ಜೆಡಿಎಸ್ ಅಧ್ಯಕ್ಷ ಗುತ್ತೇದಾರ
Update: 2025-01-07 14:01 GMT
ಕಲಬುರಗಿ : ಕಾಂಗ್ರೆಸ್ ಸರ್ಕಾರ ಬಸ್ ದರವನ್ನು ಮನಸೋ ಇಚ್ಛೆ ಏರಿಕೆ ಮಾಡಿ ಜನರಿಗೆ ಬರೆ ಎಳೆದಿದೆ. ಮಹಿಳೆಯರಿಗೆ ಉಚಿತವಾಗಿ ಕೊಟ್ಟು ಅದರ ಭಾರವನ್ನು ಪುರುಷರ ಮೇಲೆ ಹೇರುವುದು ಸರಿಯಲ್ಲ. ತಕ್ಷಣ ಟಿಕೆಟ್ ದರ ಏರಿಕೆ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರ ದರ ಏರಿಕೆ ಮೂಲಕ ಜನರ ಮೇಲೆ ಹೊರೆ ಹಾಕುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುತ್ತೇವೆಂದು ಹೇಳಿ, ಅದರ ವೆಚ್ಚ ಭರಿಸಲು ಬೆಲೆ ಏರಿಕೆ ಮಾಡಿದ್ದಾರೆ.
ಅಧಿಕಾರದ ಮದ, ದರ್ಪದಿಂದ ನಡೆಯುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಕನಿಷ್ಠ ಪ್ರಜ್ಞೆ, ಸಂವೇದನೆ ಇಲ್ಲ. ಈ ಸರ್ಕಾರ ಹೇಳಿದ್ದನ್ನು ಕೇಳಿಸಿಕೊಂಡು, ಮಾಡಿದ್ದನ್ನು ನೋಡಿಕೊಂಡು ಇರಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನಮಗೆ ಕೊಟ್ಟಿದೆ ಎಂದು ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.