ಕಲಬುರಗಿ | ಆಟೋಮೊಬೈಲ್ ಅಂಗಡಿಗೆ ಆಕಸ್ಮಿಕ ಬೆಂಕಿ : ಪರಿಹಾರಕ್ಕೆ ಆಗ್ರಹ

Update: 2025-01-08 11:38 GMT

ಕಲಬುರಗಿ : ಅಫಜಲ್ ಪುರ ಪಟ್ಟಣದ ಹೊರವಲಯದಲ್ಲಿರುವ ಘತ್ತರಗಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂ.ಎ.ಪಿ ಕಾಲೋನಿ ಬಳಿ ಚಾಂದಪಾಶ ಖುರೇಶಿ ಎಂಬ ಕಾರ್ಮಿಕನ ಆಟೋಮೊಬೈಲ್ ಅಂಗಡಿಗೆ ಬುಧವಾರ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಲಕ್ಷ ರೂ. ಸಾಮಗ್ರಿಗಳು ಹಾನಿಯಾಗಿದೆ ಎಂದು ಅಂಗಡಿ ಮಾಲಕ ಚಾಂದಪಾಶಾ ಖುರೇಶಿ ಅಳಲು ತೋಡಿಕೊಂಡಿದ್ದಾನೆ.

ಈಗಾಗಲೇ ಹಲವು ಕಡೆ ಸಾಲ ಮಾಡಿ ಅಂಗಡಿ ಹಾಕಿ ಕುಟುಂಬ ಸಾಗಿಸಿಕೊಂಡು ಬರುತ್ತಿದ್ದೇನೆ. ಹೀಗಾಗಿ ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತೀನ್ ಪಟೇಲ್ ಅವರು ಮಾತನಾಡಿ, ಆರ್ಥಿಕವಾಗಿ ಬಡತನದಲ್ಲಿರುವ ಚಾಂದಪಾಶಾ ಖುರೇಶಿ ಅವರ ಆಟೋಮೊಬೈಲ್ ಅಂಗಡಿಯಲ್ಲಿರುವ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈತನ ನೆರವಿಗೆ ಸರ್ಕಾರ ಮುಂದೆ ಬಂದು ಸೂಕ್ತ ಪರಿಹಾರ ಒದಗಿಸಬೇಕು. ಹಾಗೂ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಘಟನಾ ಸ್ಥಳಕ್ಕೆ ಅಫಜಲಪುರ ಜೆಸ್ಕಾಂ ಶಾಖಾಧಿಕಾರಿ ಸೈಯಾದ್ ಇಸಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News