ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ
ಕಲಬುರಗಿ : ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕೇಸಿಗೆ ವ್ಯತ್ಯಾಸವಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಯಾಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ ತಪ್ಪಿತಸ್ಥರು ಯಾರು ಎನ್ನುವುದು ಗೊತ್ತಾಗಲಿದೆ. ಈಗಾಗಲೇ ಬೀದರ್ ಉಸ್ತುವಾರಿ ಸಚಿವರು ಸಚಿನ್ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ, ನಾನು ಬೇರೆ ಕೆಲಸಕ್ಕೆ ಬೀದರ್ ಗೆ ಬಂದಿದ್ದೇನೆ ಸಚಿನ್ ಪಂಚಾಳ ಮನೆಗೆ ಭೇಟಿ ನೀಡುವುದಿಲ್ಲ ಎಂದು ಹೇಳಿದರು.
ಡಿಕೆಶಿ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ನಡೆದಿಲ್ಲ :
ಈಗ ಮುಖ್ಯಮಂತ್ರಿಗಳು ಇದ್ದಾರೆ, ಅವರನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನು ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದೇವೆ. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಈ ಸಭೆಯಲ್ಲಿ ಅಂತಹ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಮೈಹಿಮೂದ ಪಟೇಲ ಸಾಸರಗಾಂವ, ಬಸವರಾಜ ಮಾಲಿ, ಅಬ್ದುಲ ಬಾಸೀದ್, ಶರಣು ಪಾಟೀಲ ಮೋತಕಪಳ್ಳಿ, ಅನ್ವರ ಖತೀಬ್, ನರಸಿಂಮ್ಲೂ ಕುಂಬಾರ್, ಸಂತೋಷ ಗುತ್ತೆದ್ದಾರ್, ಅಜೀತ ಪಾಟೀಲ, ಶಬ್ಬೀರ ಅಹ್ಮದ, ಜಗನ್ನಾಥ ಗುತ್ತೇದ್ದಾರ, ವೀರಶೇಟ್ಟಿ ಪಾಟೀಲ ನಾಗಾಇದಲಾಯಿ, ರಾಮಚಂದ್ರ ಪೋಚವರಾಮ್, ಮತೀನ ಸೌಧಗರ್ ಗಂಗಾಧರ ಗಡ್ಡಿಮನಿ ಸೇರಿದಂತೆ ಮತ್ತಿತರರು ಇದ್ದರು.