ಕಲಬುರಗಿ | ಗಡಿನಾಡ ಸಂಗೀತ ಸೇವಾ ಸಂಸ್ಥೆಯಿಂದ ಸಂಗೀತೋತ್ಸವ ಕಾರ್ಯಕ್ರಮ

Update: 2024-12-23 07:12 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗವು ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ್‌ ಹೇಳಿದರು.

ಗಡಿನಾಡ ಸಂಗೀತ ಸೇವಾ ಸಂಸ್ಥೆ (ರಿ) ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ನಡೆದ ಕಲಬುರಗಿ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತವು ನಮ್ಮ ಪರಂಪರೆಯ ಯುವ ಪೀಳಿಗೆಗೆ ಒಂದು ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್‌ ಮಾತನಾಡಿ, ಸಂಗೀತವು ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಉತ್ತಮ ಕಲಾವಿದರನ್ನು ಕೊಟ್ಟಿದೆ. ಅನೇಕ ಜನ ಸಂಗೀತ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಕಲಬುರಗಿಯ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಅಣ್ಣಾರಾವ ದುತ್ತರಗಾಂವ, ವೀರಣ್ಣ ಹೊನ್ನಶೇಟ್ಟಿ ದುತ್ತರಗಾಂವ, ರಾಜು ಗೌಡ ಜವಳಿ(ಡಿ), ಶಂಭುಲಿಂಗಯ್ಯ ಸ್ವಾಮಿ ಭಾಗವಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.

ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಬಸವರಾಜ ಬಂಟನೂರ, ಜಗದೀಶ ನಗನೂರ, ಹಣಮಂತರಾವ ಮಳ್ಳಿ , ಸಂತೋಷ ಕುಮಾರ ನಂದರಗಿ , ವಿದ್ಯಾಶ್ರೀ ಸಾಲಿಮಠ, ರೇಣುಕಾ ಪ್ರವಿಣ್‌ ಕುಮಾರ ಸೇರಿ ಹಲವರು ಉಪಸ್ಥಿತರಿದ್ದರು.

ವೀರಭದ್ರಯ್ಯ ಸ್ಥಾವರಮಠ ಸ್ವಾಗತಿಸಿದರು. ಗುರುಶಾಂತಯ್ಯ ಸ್ಥಾವರಮಠ ವಂದಿಸಿದರು. ವಿಶ್ವನಾಥ ಮಠಪತಿ ರಾಜನಾಳ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News