ಕಲಬುರಗಿ | ಡಾ.ಶಿವಕುಮಾರ ಸ್ವಾಮೀಜಿ ಜಯಂತಿ; ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ
Update: 2025-04-01 22:05 IST

ಕಲಬುರಗಿ : ನಗರ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್‌ನ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಲಿಂಗೈಕೆ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 118 ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಶಿವಕುಮಾರ ಶ್ರೀಗಳ ತತ್ವಾದರ್ಶ ಬಗ್ಗೆ ಮೆಲುಕು ಹಾಕಲಾಯಿತು. ನಂತರ ಕಾಯಕಯೋಗಿ ಸೇವಾ ಸಂಸ್ಥೆ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.
ಕಾಯಕಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣಿ, ಕೃಷಿ ಉದ್ದಿಮೆದಾರ ಮಹಾಂತೇಶ್ ರೋಜೆ, ಸಮಾಜ ಸೇವಕರಾದ ಹರೀಶ್ ಹಂಗರಗಿ, ವಿಜಯ್ ಕುಮಾರ್ ಬೆಳಮಗಿ, ಪ್ರಶಾಂತ್ ಅವರಾದ, ಮಹೇಶ್ ನರೋಣ, ಜಗದೀಶ್ ನಾಗೂರ್, ಪ್ರವೀಣ್ ಬೋಗೊಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.