ಕಲಬುರಗಿ | ಕಬ್ಬು ಬೆಳೆಯ ನಡುವೆ ಬೆಳೆದಿದ್ದ ಗಾಂಜಾ ಜಪ್ತಿ : ಪ್ರಕರಣ ದಾಖಲು

Update: 2024-11-02 07:41 GMT

ಕಲಬುರಗಿ : ಅಫಜಲಪುರ ತಾಲೂಕಿನ ಗೊಬ್ಬರ ಬಿ.ಗ್ರಾಮದ ಜಮೀನೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಕಬ್ಬಿನ ಬೆಳೆ ಮಧ್ಯೆ ಬೆಳೆದಿರುವ ಗಾಂಜಾ ಗಿಡಗಳು ವಶಪಡಿಸಿಕೊಂಡಿದ್ದಾರೆ.

ದಾಳಿ ನಡೆಸಿದ ಅಧಿಕಾರಿಗಳು, ಒಟ್ಟು 57.7.ಕೆ.ಜಿ. ಒಣ ಗಾಂಜಾ ಮತ್ತು 15 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ  ಎಂದು ತಿಳಿದು ಬಂದಿದೆ. ಜಮೀನಿನ ಮಾಲೀಕರ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ-1985ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಆಳಂದ ವಲಯ ಕಛೇರಿಯ ಅಬಕಾರಿ ನಿರೀಕ್ಷಕ ಶ್ರೀಧರ ನಿರೋಣಿ, ಅಬಕಾರಿ ಉಪ ನಿರೀಕ್ಷಕ ಬಸವರಾಜ ಮಾಲಗತ್ತಿ ಹಾಗೂ ಕಲಬುರಗಿ ವಿಭಾಗ ಕಛೇರಿಯ ಅಬಕಾರಿ ನಿರೀಕ್ಷಕ ನರೇಂದ್ರಕುಮಾರ ಹೊಸಮನಿ ಸೇರಿದಂತೆ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News