ಕಲಬುರಗಿ | ತೊಗರಿಬೆಳೆ ಹಾನಿ ಪ್ರದೇಶಗಳಿಗೆ ಡಿಸಿ ಭೇಟಿ
ಕಲಬುರಗಿ : ಜಿಲ್ಲೆಯಲ್ಲಿ ತೊಗರಿ ಬೆಳೆಯು ಕೆಲವಡೆ ಮಣ್ಣಿನಲ್ಲಿ ತೇವಾಂಶ ಕೊರತೆ ಹಾಗೂ ಒಣ ಬೇರುಕೊಳೆ ರೋಗದಿಂದ ಒಣಗುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಕಲಬುರಗಿ ಜಂಟಿ ಕೃಷಿ ನಿರ್ದೇಕರ ಸಮದ್ ಪಟೇಲ, ಜಿಲ್ಲಾ ಉಪ ನಿರ್ದೇಶಕರು ತೋಟಗಾರಿಕೆ ಸಂತೋಷ ಇನಾಮದಾರ, ಹಾಗೂ ತಹಶೀಲ್ದಾರ್ ಕಲಬುರಗಿ ಆನಂದಶೀಲ ಸಮೇತ ಅವರು ಕಲಬುರಗಿ ತಾಲೂಕಿನ ಪಟ್ಟಣ, ಆಳಂದ ತಾಲೂಕಿನ ಕಡಗಂಚಿ ಗ್ರಾಮ ಹಾಗೂ ಅಫಜಲ್‌ಪುರ ತಾಲೂಕಿನ ನೀಲೂರು ಗ್ರಾಮಗಳ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ತೊಗರಿಬೆಳೆ ಒಣಗುತ್ತಿರುವ ಬಗ್ಗೆ ವೀಕ್ಷಿಸಿದರು.
ಈ ರೀತಿ ಬೆಳೆ ಹಾಳಾದ ಬಗ್ಗೆ ರೈತರೊಂದಿಗೆ ಚರ್ಚಿಸಿ ಹೆಚ್ಚಿನ ವಿವರವನ್ನು ಪಡೆದರು. ಈಗಾಗಲೇ ಬೆಳೆವಿಮೆ (ಸ್ಥಳೀಯ ವಿಕೋಪ) ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ನ.27ರಂದು ಜರುಗಿಸಲಾಗಿದ್ದು, 76.940 ಕೋಟಿ ರೂ.ವನ್ನು ತೊಗರಿ, ಉದ್ದು, ಹೆಸರು, ಹತ್ತಿ, ಸೋಯಾಬೀನ್ ಇತರೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿರುವ ಎಲ್ಲಾ ರೈತರ ಖಾತೆಗೆ ಜಮೆ ಮಾಡಲು ತಾವು ಸೂಚಿಸಿರುವುದಾಗಿ ರೈತರಿಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ನೀರಾವರಿ ಸೌಲಭ್ಯವಿರುವ ರೈತರು ಕೂಡಲೇ ಒಂದು ಸಲ ನೀರನ್ನು ತೊಗರಿಬೆಳೆಗೆ ಹಾಯಿಸಲು ತಿಳಿಸಿದರು. ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಅಂತರ್ ಬೇಸಾಯ ಕೈಗೊಂಡು ಬಿರುಕುಗಳನ್ನು ಮುಚ್ಚುಲು ರೈತರಿಗೆ ತಿಳಿಸಿದರು.