ಕಲಬುರಗಿ | ಲೋಕೋಪಯೋಗಿ ಕಚೇರಿ ಮುಂದೆ ನಮ್ಮ ಕರ್ನಾಟಕ ಸೇನೆಯಿಂದ ಧರಣಿ
ಕಲಬುರಗಿ | ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲ್‌ಪುರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್ ಕಾಮಗಾರಿ ಕಳಪೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅಮಾನತ್ತು ಗೊಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ವತಿಯಿಂದ ಕಲಬುರಗಿ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ನಡೆಸಲಾಯಿತು.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟೆನೆನ್ಸ್ ಕಾಮಗಾರಿ ಪ್ರತಿ ವರ್ಷ ಟೆಂಡರ್ ಕಾಮಗಾರಿ ಕರೆದು ನಿಯಮಗಳನ್ನು ಗಾಳಿಗೆ ತೂರಿ ಅಲ್ಪಸ್ವಲ್ಪ ಜೆಸಿಬಿ ಮತ್ತು ಟ್ಯಾಕ್ಟರ್‌ಗಳನ್ನು ಹಚ್ಚಿ ಕಂಟಿಗಳನ್ನು ಕಿತ್ತದೆ ಹಾಗೂ ಮುರುಮ ಹಾಕದೆ ಕಾಮಗಾರಿಯನ್ನು ಮಾಡಿರುತ್ತಾರೆ. ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕೆಂದು ನ.5ರಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇಲ್ಲಿಯವರೆಗೆ ಯಾವುದೇ ಪ್ರಯೋಜನೆವಾಗಿರುವುದಿಲ್ಲ. ಭ್ರಷ್ಟಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಅಮಾನತ್ತುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೇನೆಯ ಜಿಲ್ಲಾ ಅಧ್ಯಕ್ಷ ಸುಧೀಂದ್ರ ಎಮ್ ಇಜೇರಿ, ಕಲಬುರಗಿ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಕಿರಣ ಹಂಪಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ರಾಠೋಡ, ಶೀವುಕುಮಾರ ನಾಸಿ, ರಾಜು ಮಾಯಕ,ರಾಜು ಲಿಂಬಾಳಕರ್, ಶಿವಲಿಂಗ ಹಳ್ಳಿ, ಸುಧೀರ ವಳಕೇರಿ, ಶರಣು ಗೌರನಳ್ಳಿ, ಶಿವಶಂಕರ ಗೌಡಪಾಟೀಲ, ಲಿಂಗು ದೊಡ್ಡಮನಿ, ಸಿದ್ದು ಕಲ್ಲಬಂಡೆ, ಮಹೇಶ ಪಾಟೀಲ, ಅಪ್ಪುಗೌಡ ಮಾಲಿಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.