ಕಲಬುರಗಿ | ಅಂತರ್ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆ

Update: 2024-11-27 13:38 GMT

ಕಲಬುರಗಿ : ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪದವಿ ಮಹಾವಿದ್ಯಾಲಯಗಳಿಗೆ ನಡೆಸಿರುವ ಅಂತರ್ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯಲ್ಲಿ ಎಂ.ಎಸ್ ಇರಾಣಿ ಪದವಿ ಮಹಾವಿದ್ಯಾಲಯದ ಬಿ.ಎ ತೃತೀಯ ಸೆಮಿಸ್ಟರ್ ವಿದ್ಯಾರ್ಥಿ ಜೈ ಪ್ರಕಾಶ್ ಕರಣಕುಮಾರ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ವಿದ್ಯಾರ್ಥಿಗೆ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳ ಆಪ್ತ ಸಲಹೆಗಾರರು ಆಗಿರುವ ಆಳಂದ ಶಾಸಕರಾದ ಬಿ.ಆರ್ ಪಾಟೀಲ್ ,ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಅವರು ವಿದ್ಯಾರ್ಥಿಗೆ 10,000 ರೂ. ನಗದು ಬಹುಮಾನ ವಿತರಿಸಿದರು. ಈ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಪ್ರೊ.ರೋಹಿಣಿಕುಮಾರ್ ಹಿಳ್ಳಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಇ ಎಲ್ ಸಿ ಸಂಯೋಜಕರಾದ ಡಾ. ರೇಣುಕಾ ಎಸ್. ಪಾಟೀಲ್ ಅಭಿನಂದಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News