ದೇಶದ ಭದ್ರತೆಗೆ ಪೊಲೀಸ್ ಇಲಾಖೆ ಸೇವೆ ಅಮೂಲ್ಯವಾದದ್ದು: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಪೊಲೀಸ್ ಇಲಾಖೆಯು ದೇಶದ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಇಡೀ ವರ್ಷ ಕರ್ತವ್ಯ ನಿರ್ವಹಿಸುತ್ತದೆ. ಅವರ ಸೇವೆ ನಿಜಕ್ಕೂ ಅಮೂಲ್ಯವಾದದ್ದು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಹೇಳಿದ್ದಾರೆ.
ಬುಧವಾರದಂದು ನಗರದ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದಿನಿಂದ ನ.29ರವರಗೆ ಹಮ್ಮಿಕೊಂಡಿರುವ ಕಲಬುರಗಿ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೊಲೀಸರು ತಮ್ಮ ಕೆಲಸದಲ್ಲಿ ಯಾವುದಾದರೂ ಪ್ರಕರಣ ನಿರ್ವಹಿಸಬೇಕಾದರೆ ಅವರು ಅಲ್ಲಿ ದೈಹಿಕವಾಗಿ ಜೊತೆಗೆ ಮಾನಸಿಕವಾಗಿಯೂ ಕೆಲಸಮಾಡಬೇಕಾಗುತ್ತದೆ. ಬಹಳಷ್ಟು ಇಲಾಖೆಗಳು ಶಿಸ್ತು ಇರುವುದಿಲ್ಲ ಆದರೇ ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿದೆ. ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಕ್ರೀಡೆಯಿಂದ ಮಾನಸಿಕವಾಗಿ ಸದೃಢರಾಗಬಹುದು ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳುವ ಅತ್ಯಾವಶ್ಯಕವಾಗಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳವುದು ಅತ್ಯಾವಶ್ಯಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ.ಎನ್.ಶ್ರೀನಿಧಿ, ಗ್ರಾಮೀಣ ಉಪವಿಭಾಗ ಸಹಾಯಕ ಪೋಲಿಸ್ ಅಧೀಕ್ಷಕಿ ಬಿಂದುಮಣಿ ಆರ್.ಎನ್., ಅಪರಾಧ ಪೋಲಿಸ್ ಠಾಣೆ ಬಸವೇಶ್ವರ, ಚಿಂಚೋಳಿ ಉಪವಿಭಾಗ ಡಿ.ಎಸ್.ಪಿ. ಸಂಗಮನಾಥ ಹಿರೇಮಠ, ಶಹಾಬಾದ ಉಪವಿಭಾಗದ ಶಂಕರಗೌಡ ಪಾಟೀಲ, ಆಳಂದ ಉಪವಿಭಾಗದ ಡಿ.ಎಸ್.ಪಿ. ಗೋಪಿ ಬಿ.ಆರ್., ನಿವೃತ್ತ ಪೋಲಿಸರು, ಪೊಲೀಸ್ ಘಟಕಗಳಾದ ಕೆ.ಎಸ್.ಆರ್.ಪಿ. 6ನೇ ಪಡೆ, ಪಿ.ಟಿ.ಸಿ. ನಾಗೇನಹಳ್ಳಿ, ಲೋಕಯುಕ್ತ ಎಸ್ಡಿಆರ್ಎಫ್ ಘಟಕದ ಅಧಿಕಾರಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತಿತರು ಇದ್ದರು.