ನನ್ನ ಕಾರು ಸ್ಫೋಟಿಸುವ ಬೆದರಿಕೆ ಬಂದಿದೆ : ಕಲಬುರಗಿ ಕಾರಾಗೃಹದ ಆಧೀಕ್ಷಕಿ ಡಾ.ಅನಿತಾ.ಆರ್ ಮಾಹಿತಿ

Update: 2024-11-28 09:21 GMT

ಕಲಬುರಗಿ : ಇಲ್ಲಿನ ಹೊರವಲಯದಲ್ಲಿ ಇರುವ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ.ಆರ್ ಅವರ ಕಾರು ಸ್ಫೊಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಆಡಿಯೋ ಸಂದೇಶ ಬಂದಿರುವುದು ವರದಿಯಾಗಿದೆ.

ಅನಾಮಧೇಯ ವ್ಯಕ್ತಿಯಿಂದ ನನ್ನ ಕಾರು ಬ್ಲಾಸ್ಟ್ ಮಾಡುವ ಕುರಿತು ಬೆದರಿಕೆ ಮಾಹಿತಿ ಇಂದು(ಗುರುವಾರ) 9 ಗಂಟೆಗೆ ಸಿಕ್ಕಿದೆ. ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಂಡಿದ್ದೇನೆ ಎಂದು ಕಲಬುರಗಿ ಕಾರಾಗೃಹದ ಮುಖ್ಯ ಆಧೀಕ್ಷರಾದ ಅನಿತಾ ಆರ್.ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೆ ಕಲಬುರಗಿ ಕಾರಾಗೃಹದ ಮುಖ್ಯ ಆಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಇಲ್ಲಿ ಬರುವ ಮುಂಚೆ ನನಗೆ ಬೆದರಿಕೆ ಮೆಸೇಜ್ ಬಂದಿವೆ. ಇಲ್ಲಿ ಬಂದ ಮೇಲೆ ಸಂಸ್ಥೆಯ ನಿಯಮಗಳ ಅನುಸಾರವಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನು ಸಹಿಸದ ಹಲವರಿಂದ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಜೈಲಿನ ಎಲ್ಲಾ ಬೆಳವಣಿಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಮೂವರ ವಿರುದ್ಧ ದೂರು: ನನಗೆ ಬ್ಲಾಕ್ ಮೇಲ್ ಮಾಡಿ ನನ್ನ ಸರಕಾರಿ ಕೆಲಸಗಳ ನಿರ್ವಹಣೆ ಮಾಡಲು ಅಡ್ಡಿಪಡಿಸುತ್ತಿರುವ ಹಾಗೂ ಅಕ್ರಮವಾಗಿ ಕಳ್ಳಮಾರ್ಗಗಳಿಂದ ನನ್ನ ಮೊಬೈಲ್ ನಂಬರಿಗೆ  10 ಸಾವಿರ ಫೋನ್ ಪೇ  ಮಾಡಿರುವ ನಗರದ ನಿವಾಸಿ ಅನೀಸಾ ಬೇಗಂ, ನೂರ್ ಜಾನ್ ಮತ್ತು ಕೈದಿ ಶೇಕ್ ಮುಸ್ತಫ ಸೇರಿದಂತೆ ಇದರಲ್ಲಿ ಶಾಮೀಲಾಗಿರುವ ಇತರರು ಮತ್ತು ಪಿತೂರಿ ಮೂಲಕ ನನಗೆ ಜೀವ ಬೆದರಿಕೆ ಒಡ್ಡುತ್ತಿರುವ ಮತ್ತು ಈ ಅಕ್ರಮ ಷಡ್ಯಂತರದಲ್ಲಿ ಶಾಮೀಲಾಗಿರುವವರ ಮೇಲೆಯೂ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನನಗೆ ಅಗತ್ಯ ರಕ್ಷಣೆ ನೀಡಬೇಕಾಗಿ ಸಿಇಎನ್ ಠಾಣೆಗೆ ನೀಡಿದ ದೂರಿನಲ್ಲಿ ಡಾ.ಅನಿತಾ.ಆರ್ ಕೇಳಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News