ಕಲಬುರಗಿ | ʼಡಿಜಿಟೆಕ್ ಆಧಾರಿತ ಕಲಿಕಾ ನಿರ್ವಹಣಾ ಕೌಶಲ್ಯʼ ಕಾರ್ಯಾಗಾರ

Update: 2024-11-13 11:10 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕೆಕೆಆರಡಿಬಿ ಹಾಗೂ ಪಿಎಂ -ಉಷಾ ಯೋಜನೆ ಅನುದಾನ ಇವು ಭವಿಷ್ಯದಲ್ಲಿ ವರದಾನವಾಗಿದೆ. ಡಿಜಿಟೆಕ್ ಆಧಾರಿತ ತರಬೇತಿ ಮತ್ತು ಕೌಶಲ್ಯ ಕಲಿಕೆಯಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಅಧ್ಯಾಪಕರಿಗೆ ವಿನೂತನ ತಂತ್ರಜ್ಞಾನ ಉನ್ನತೀಕರಣ ಅನುಭವ ಸಿಗಲಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ತಿಳಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಸುಧಾರಣೆ ಕೋಶ (ಐಕ್ಯೂಎಸಿ) ಪಿಎಂ-ಉಷಾ ಯೋಜನೆ ಘಟಕ-4ರ ಅಡಿಯಲ್ಲಿ ಸಸ್ಯಾಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಿಗಾಗಿ ಆಯೋಜಿಸಿದ್ದ ‘ಡಿಜಿಟೆಕ್ ಆಧಾರಿತ ಕಲಿಕಾ ನಿರ್ವಹಣಾ ಕೌಶಲ್ಯ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದ 20 ಎಕರೆ ಪ್ರದೇಶದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಯಿಂದ ವಿದ್ಯಾರ್ಥಿಗಳ ಜ್ಞಾನವರ್ಧನೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಲಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ನಾವಿನ್ಯ ಕಲಿಕೆಗೆ ಅವಕಾಶ ಸಿಗುತ್ತದೆ. ಡಿಜಿಇನ್ನೋವೆಷನ್ ಇಂಡಿಯಾ ತಂಡದಿಂದ ಬಹು ಕೌಶಲ್ಯ ಕಲಿಕೆ ತರಬೇತಿಗೆ ಪ್ರೇರಣೆ ಸಿಗಲಿದೆ ಎಂದರು.

ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಡಾ.ರವೀಂದ್ರ ಎಸ್. ಹೆಗಡಿ ಮಾತನಾಡಿ, ಜಾಗತಿಕ ತಂತ್ರಜ್ಞಾನ ಉತ್ಪನ್ನದಿಂದ ತಂತ್ರಾಶ ಬಳಕೆ ಉನ್ನತೀಕರಣ ಸುಲಭ, ತಾಂತ್ರಿಕತೆಯ ನವನವೀನ ಕೌಶಲ್ಯ ಬಳಕೆದಾರರಿಂದ ಸೇವೆ ಸುಲಭವಾಗಲಿದೆ. ಯುವಕರು ಮತ್ತು ವಿವಿಧ ವೃತ್ತಿಗಾರರ ಬಳಕೆಯಿಂದ ಭವಿಷ್ಯದ ದಿಕ್ಕನ್ನು ತೀವ್ರಗೊಳಿಸುತ್ತದೆ ಎಂದು ತಿಳಿಸಿದರು.

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಡಾ. ಸಚ್ಚಿದಾನಂದ ರೇವೂರ್ ಮಾತನಾಡಿ, ಯಾವುದೇ ಕೆಲಸದಲ್ಲಿ ತಂತ್ರಜ್ಞಾನದ ಉಪಯೋಗ ಅತಿ ಹೆಚ್ಚು ಬಳಕೆದಾರರಿಂದ ನಿರ್ಧಾರವಾಗಲಿದೆ. ಜನರ ಪ್ರಯೋಜನಕ್ಕೆ ಲಭ್ಯವಿರುವ ಹೊಸ ಸಾಫ್ಟ್ ವೇರ್ ಹೆಚ್ಚು ಬಳಸಿದರೆ ಉತ್ತಮ ಅನುಭವ ಮತ್ತು ಕೆಲಸದ ವೇಗ ಸುಲಭ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ. ಆರ್. ಕೆರೂರ್, ಡಿಜಿಇನ್ನೋವೆಷನ್ ಇಂಡಿಯಾ ನಿರ್ದೇಶಕ ರವಿಕುಮಾರ್, ಆಡಳಿತ ವಿಶೇಷಧಿಕಾರಿ ಪ್ರೊ.ಚಂದ್ರಕಾಂತ್ ಕೆಳಮನಿ, ಪ್ರೊ.ರಾಯಭಾಗಕರ್, ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಪ್ರೊ.ಎನ್.ಬಿ. ನಡುವಿನಮನಿ, ಪ್ರೊ.ಗಾಯಕವಾಡ, ಪ್ರೊ.ಸುಲೋಚನಾ, ಪ್ರೊ.ಸುಜಾತ ಇಂಗಿನಶೆಟ್ಟಿ, ಪ್ರೊ.ಡಾ. ಸುರೇಶ್ ಜಂಗೆ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News