ಕಲಬುರಗಿ | ನ.15ರಿಂದ ಸನ್ನತಿಯಿಂದ ಬೆಂಗಳೂರು ವರೆಗೆ ಪಂಚಶೀಲ ಪಾದಯಾತ್ರೆ: ಪೂರ್ವಭಾವಿ ಸಭೆ
ಕಲಬುರಗಿ: ಚಿತ್ತಾಪುರ ತಾಲೂಕಿನ ಸನ್ನತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬೌದ್ಧ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ನವೆಂಬರ್ 15ರಿಂದ ಸನ್ನತಿಯಿಂದ ಬೆಂಗಳೂರುವರೆಗೆ ಸುಮಾರು 800 ಕಿಲೋಮಿಟರ್ ದೂರ ಕ್ರಮಿಸುವ ಪಂಚಶೀಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪೂಜ್ಯ ಬಿಕ್ಕು ಸಂಘದ ಸಾನಿಧ್ಯದಲ್ಲಿ ಬೋಧಿದತ್ತ ಥೇರೋ ಬಂತೆಜಿ ನೇತೃತ್ವದಲ್ಲಿ ನಡೆಯುವ ಈ ಪಾದಯಾತ್ರೆಯ ಯಶಸ್ವಿಗಾಗಿ ಪೂರ್ವಭಾವಿ ಸಭೆಯು ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜರುಗಿತು.
ಈ ಪಾದಯಾತ್ರೆಗೆ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಬೆಂಬಲ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ವರಜ್ಯೋತಿ ಭಂತೇಜಿ ಮಾತನಾಡಿ, ವಿಶ್ವದ ಪಾರಂಪರಿಕ ಸ್ಥಳಗಳಲ್ಲಿ ಸನ್ನತಿಯೂ ಇದೆ, ಅದರ ಅಭಿವೃದ್ಧಿ ಕಾರ್ಯ ನಡೆಯಬೇಕು, ಅದಕ್ಕಾಗಿ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಿದಾಗ ಯಶಸ್ವಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ವರಜ್ಯೋತಿ ಭಂತೇಜಿ, ಧಮ್ಮದೀಪ ಭಂತೇಜಿ, ಮುಖಂಡರಾದ ಸೂರ್ಯಕಾಂತ ನಿಂಬಾಳ್ಕರ್, ಸುರೇಶ ಕಾನೇಕರ, ಮರೇಪ್ಪ ಬುಕ್ಕಲ್, ರಣದೀಪ ಹೊಸಮನಿ, ರಾಹುಲ್ ಹುಲಿಮನಿ, ವೆಂಕಟೇಶ ಹೊಸಮನಿ, ಹಣಮಂತ ಯಳಸಂಗಿ, ಮರೇಪ್ಪ ಹಳ್ಳಿ, ಮರೆಪ್ಪ ಚಟರಕರ್, ಹಣಮಂತ ಅನೈಹುಳ, ಪಾರ್ಥ ನಾಗಬೌದ್ಧ, ಸೋನು ಮೆಂಗನ್, ನೀಲಕಂಠ ಬಡೇಗೆರ್, ಲಕ್ಷ್ಮೀಣ ಸೋನ ಕಾಂಬಳೆ, ರಾಘವೇಂದ್ರ ಫರತಾಬಾದ, ಪ್ರಕಾಶ ಭಾಲೆ, ಜಗನ್ನಾಥ ನಂದಾ, ಸುರೇಶ ಮೇಂಗನ, ವಿಷ್ಣು ಹುಡಗಿಕರ್, ಕಪಿಲ್ ಭನ್ನಿ, ಸುನೀಲ ಡೋಲಾ, ಶ್ರೀರಂಗ ಡೋಲಾ, ಇಂದ್ರಜೀತ್ ಮಿತ್ರಾ, ಭರತ್ ಭಾಗೇಕಾರ್ ಉಪಸ್ಥಿತರಿದ್ದರು.