ಸಂವಿಧಾನ ಗೌರವಿಸಿ, ಮೌಲ್ಯಗಳನ್ನು ಎತ್ತಿ ಹಿಡಿಯೋಣ : ಮರೆಪ್ಪ ಹಳ್ಳಿ

Update: 2024-11-28 17:18 GMT

ಕಲಬುರಗಿ : ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನವೇ ಆತ್ಮ.1949ರ ಈ ದಿನ ಭಾರತದ ಸಂವಿಧಾನವು ಸಮರ್ಪಣೆಯಾದಂತಹ ಸುದಿನ. ಈ ಮಹತ್ವದ ದಿನದಂದು ನಮ್ಮ ಸಂವಿಧಾನ ಗೌರವಿಸೋಣ ಹಾಗೂ ಅದರ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದ್ದಾರೆ.

ದಸಂಸ ವತಿಯಿಂದ ಶಹಾಬಾದ್ ನಗರದ ಸಾಮ್ರಾಟ್ ಅಶೋಕ ಉದ್ಯಾನವನದಲ್ಲಿ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಓದು ಮೂಲಕ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾತನಾಡಿದರು.

ದೇಶದಲ್ಲಿಯೇ ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ಗೌರವಿಸಲಾಗುತ್ತದೆ. ಸಂವಿಧಾನ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಅದ್ಭುತ ಕೊಡುಗೆ ಅದನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು. ದೇಶದಲ್ಲಿ ಕೋಮು ಭಾವನೆ, ಪ್ರಜಾಪ್ರಭುತ್ವದ ಅಣಕ, ಸಂವಿಧಾನ ವಿರೋಧಿ ಹೇಳಿಕೆಗಳು ಬರುತ್ತಿವೆ. ಇಂತಹ ಹೇಳಿಕೆ ನೀಡುವವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಲು ಸರಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂವಿಧಾನ ಉಳಿವಿಗಾಗಿ ಭಾರಿ ಹೋರಾಟಗಳೇ ಆರಂಭವಾಗಿ ಇಡೀ ದೇಶ ಕತ್ತಲ ಕೂಪಕ್ಕೆ ತಳ್ಳಲ್ಪಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡರಾದ ನಾಗಪ್ಪ ರಾಯಚೂರಕರ್ ಮಾತನಾಡಿ, ಭಾರತವನ್ನು ಸಾರ್ವಭೌಮ, ಜಾತ್ಯಾತೀತ ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನ್ಯಾಯ ಒದಗಿಸಲಾಗಿದೆ. ಭಾರತ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದರು.

ಮುಖoಡರಾದ ಸಂತೋಷ ಕುಂಬಾರ, ಶರಣಬಸಪ್ಪ ಕುಂಬಾರ, ವಿಜಯಕುಮಾರ ಹಳ್ಳಿ, ಶಂಕರ ಅಳೊಳ್ಳಿ, ಬಸವರಾಜ ಮಯೂರ, ಕಾಶಿನಾಥ ಜೋಗಿ,ಶಿವಶಾಲಕುಮಾರ ಪಟ್ಟಣಕರ್, ಮಲ್ಲಣ್ಣ ಮರತೂರ, ಸತೀಶ ಕೋಬಾಳಕರ್, ಮಲ್ಲಿಕಾರ್ಜುನ ಕಟ್ಟಿಮನಿ,ಮಲ್ಲಣ್ಣ ಮಸ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News