ಗುಲ್ಬರ್ಗಾ ವಿವಿಯಲ್ಲಿ ʼಡಿಜಿಟೆಕ್ ಆಧಾರಿತ ಕಲಿಕಾ ನಿರ್ವಹಣಾ ಕೌಶಲ್ಯʼ ಕುರಿತು ಕಾರ್ಯಾಗಾರ

Update: 2024-11-11 13:10 GMT

ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಸುಧಾರಣೆ ಕೋಶ (ಐಕ್ಯೂಎಸಿ) ವಿಶ್ವವಿದ್ಯಾಲಯಕ್ಕೆ ಮಂಜೂರಾದ ಪಿಎಂ-ಉಷಾ ಯೋಜನೆ ಘಟಕ-4ರ ಅಡಿಯಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರಿಗಾಗಿ 'ಡಿಜಿಟೆಕ್ ಆಧಾರಿತ ಕಲಿಕಾ ನಿರ್ವಹಣಾ ಕೌಶಲ್ಯ' ಕುರಿತು ಒಂದು ದಿನದ ಕಾರ್ಯಾಗಾರವನ್ನು ನ.12 ರಂದು ಸಸ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಡಾ.ರವೀಂದ್ರ ಎಸ್. ಹೆಗಡಿ ಹಾಗೂ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಡಾ.ಸಚ್ಚಿದಾನಂದ ರೇವೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುವರು.

ಅಧ್ಯಾಪಕರಲ್ಲಿ ಪರಸ್ಪರ ಕ್ರಿಯೆಯ ಮೂಲಕ ಬೋಧನಾ ಸಿಬ್ಬಂದಿಗೆ ಅವರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಬೆಂಗಳೂರಿನ ಡಿಜಿ ಇನ್ನೋವೇಶನ್ ಇಂಡಿಯಾ ತಂಡವು ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ತರಬೇತಿ ನೀಡಲಿದ್ದಾರೆ. ಗೋಷ್ಠಿಗಳ ನಂತರ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಹೇಳಿದೆ.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ.ಆರ್.ಕೆರೂರ್ ಹಾಗೂ ಪಿಎಂ-ಉಷಾ ಯೋಜನೆ ನೋಡಲ್ ಅಧಿಕಾರಿ ಪ್ರೊ. ವಿ.ಎಂ.ಜಾಲಿ ಉಪಸ್ಥಿತರಿರುವರು. ಈ ತರಬೇತಿ ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಭಾಗವಹಿಸುವರು ಎಂದು ತಿಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News