‌ಬೆಂಗಳೂರು - ಕೊಡ್ಲಿಪೇಟೆ ನಡುವೆ ಕೆಎಸ್ಸಾರ್ಟಿಸಿ ಬಸ್ ಸೇವೆ ಪ್ರಾರಂಭ

Update: 2024-03-05 14:49 GMT

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಬೆಂಗಳೂರು - ಕೊಡ್ಲಿಪೇಟೆ ನಡುವೆ ಹೊಸ ಕೆಎಸ್ಸಾರ್ಟಿಸಿ ಬಸ್ ಸೇವೆಯನ್ನು ಮಾರ್ಚ್‌ 4ರಿಂದ ಪ್ರಾರಂಭಿಸಲಾಗಿದೆ.

ಈ ಬಸ್ ಪ್ರತಿದಿನ ಮಧ್ಯಾಹ್ನ 03.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹೊರಟು ' ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಮಾರ್ಗವಾಗಿ ಕೊಡ್ಲಿಪೇಟೆಗೆ ರಾತ್ರಿ 09:00 ಕ್ಕೆ ತಲುಪುತ್ತದೆ.

ಮರುದಿನ ಬೆಳಗ್ಗೆ ಕೊಡ್ಲಿಪೇಟೆಯಿಂದ ಹೊರಟು ಅರಕಲಗೂಡು ಹೊಳೆನರಸಿಪುರ ಚನ್ನರಾಯಪಟ್ಟಣ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.

ಈ ಬಸ್ ಸೇವೆ ಪ್ರಾರಂಭಿಸಲು ಸಹಕರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹೈಕೋರ್ಟ್ ನ ಹಿರಿಯ ವಕೀಲರಾದ ಎಚ್.ಎಸ್. ಚಂದ್ರಮೌಳಿ ಅವರಿಗೆ ಕೊಡ್ಲಿಪೇಟೆಯ ನಾಗರಿಕರು ಕ್ರತಜ್ಞತೆ ಸಲ್ಲಿಸಿದ್ದಾರೆ.

ಈ ಹೊಸ ಬಸ್ ಸೇವೆಗೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ ಮುಂಭಾಗ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ವೇಳೆ ಡಾ. ಉದಯ್ ಕುಮಾರ್, ಶಿವರಾಜ್, ಬಿಕೆ ಯತೀಶ್, ಔರಂಗಜೇಬ್, ವಹಾಬ್,ನಝೀರ್ ಅಹ್ಮದ್, ಡಿ.ಆರ್. ವೇದಕುಮಾರ್, ನಂದಕಿಶೋರ್, ದಿನೇಶ್, ನಿಖಿಲ್ ನವೀನ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News