ಕೊಡಗಿನ ವಿವಿಧೆಡೆ ಭಾರೀ ಗಾಳಿ ಮಳೆ : ಹಸು ಸಾವು, ಮರ ಬಿದ್ದು ಕಾರು ಜಖಂ

Update: 2025-04-14 21:42 IST
ಕೊಡಗಿನ ವಿವಿಧೆಡೆ ಭಾರೀ ಗಾಳಿ ಮಳೆ : ಹಸು ಸಾವು, ಮರ ಬಿದ್ದು ಕಾರು ಜಖಂ
  • whatsapp icon

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ. 

ಮಡಿಕೇರಿ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಭಾರೀ ಗಾಳಿ ಮಳೆಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ರಸ್ತೆಗೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶದಿಂದ ಹಸುವೊಂದು ಬಲಿಯಾದ ಘಟನೆ ಕಶಾಲನಗರ ಸಮೀಪ ಗುಡ್ಡೆಹೊಸೂರಿನಲ್ಲಿ ನಡೆದಿದೆ. ರವಿ ಎಂಬುವವರಿಗೆ ಸೇರಿದ ಹಸು ಇದಾಗಿದೆ.

ಕುಶಾಲನಗರ ಮತ್ತು ಕೊಪ್ಪ ಭಾಗದಲ್ಲಿ ಮಳೆಯ ನೀರು ಕೆಲವು ಅಂಗಡಿಗಳಿಗೆ ನುಗ್ಗಿದ ಘಟನೆಯೂ ನಡೆದಿದೆ. ಭಾರೀ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಕಾರು ಜಖಂಗೊಂಡ ಘಟನೆ ಮಡಿಕೇರಿ ತಾಲ್ಲೂಕಿನ ಆವಂದೂರು ಗ್ರಾಮದಲ್ಲಿ ನಡೆದಿದೆ. ದೇವಾಯಿರ ಸಂತೋಷ್‌ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಮಡಿಕೇರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸೋಮವಾರಪೇಟೆ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲೂ ಮಳೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News