ಕೋಲಾರ ಜಿಲ್ಲೆಯ ಹೈನುಗಾರಿಕೆಗೆ ವರದಾನವಾದ ನರೇಗಾ

Update: 2024-09-30 07:27 GMT

ಕೋಲಾರ,: ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಸಿಲ್ವಿಪ್ಯಾಶ್ಚರ್ (ಬಹುವಾರ್ಷಿಕ ಮೇವು) ಕಾಮಗಾರಿ ಈಗ ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ಪಶುಗಳಿಗೆ ಬೇಕಾದ ಹಸಿರು ಮೇವು ಬೆಳೆಯಲು ನರೇಗಾದಡಿ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಹೈನುಗಾರಿಕೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಸಿಲ್ವಿಪ್ಯಾಶ್ಚರ್ ಕಾಮಗಾರಿಯಡಿಯಲ್ಲಿ ಸೀಮೆಹುಲ್ಲು ಬೆಳೆಯಲು ಅವಕಾಶ ನೀಡಲಾಗಿದ್ದು, ರೈತರಿಗೆ ಹಸಿರು ಮೇವಿನ ಸಮಸ್ಯೆಗೆ ಪರಿಹಾರ ದೊರೆತಿದೆ.

ಕೋಲಾರ ಜಿಲ್ಲೆಯ ಗ್ರಾಮೀಣ ಜನರಿಗೆ ಹೈನುಗಾರಿಕೆ ಜೀವನಾಧಾರ. ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹಸು, ಕುರಿ, ಮೇಕೆ ಸಾಕಣೆಗೆ ಶೆಡ್ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದರೊಂದಿಗೆ ಈ ವರ್ಷದಿಂದ ಪಶುಗಳಿಗೆ ಬೇಕಾದ ಹಸಿರು ಮೇವು ಬೆಳೆಯಲು ನರೇಗಾದಡಿ ಆರ್ಥಿಕ ಸಹಾಯ ದೊರೆಯುತ್ತಿದೆ. ನರೇಗಾದಡಿಯಲ್ಲಿ ಸಿಲ್ವಿ ಪ್ಯಾಶ್ಚರ್(ಬಹುವಾರ್ಷಿಕ ಮೇವು) ಬೆಳೆಯಲು ಅರ್ಧ ಎಕರೆಗೆ ರೈತರಿಗೆ 10,700 ರೂ. ನೆರವು ನೀಡಲಾಗುತ್ತಿದೆ.

ಹಾಲಿನ ಉತ್ಪಾದನೆಯು ಹಸುಗಳಿಗೆ ನೀಡುವ ಗುಣಮಟ್ಟದ ಹಸಿರು ಮೇವು, ಹಾಗೂ ಸಮತೋಲನ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಹಸಿರು ಮೇವು ಉತ್ಪಾದನೆಗಾಗಿ ನರೇಗಾದಡಿಯಲ್ಲಿ ಬಹುವಾರ್ಷಿಕ ಮೇವು ಬೆಳೆಯಲು ಸಹಾಯ ನೀಡಲಾಗುತ್ತಿದೆ. ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮ ಪಂಚಾಯತ್‌ನ ಚಾಕಲನಹಳ್ಳಿ ಗ್ರಾಮದ ರೈತ ದಿನೇಶ್ ರಾಜು, ಈಗ ನರೇಗಾಡಿಯಲ್ಲಿ ಸಿಲ್ವಿಪ್ಯಾಶ್ಚರ್ ಕಾಮಗಾರಿ ಕೈಗೊಂಡಿದ್ದು, ತಮ್ಮ ಮೇವಿನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಮೇವು ಸಮಸ್ಯೆ: ದಿನೇಶ್ ರಾಜು ಕೃಷಿ ಜೊತೆಗೆ ತಮ್ಮ ಮನೆಯಲ್ಲಿ 6 ಹಸು, 50 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ದನ ಸಾಕಣೆ ಈ ಹಿಂದೆ ನರೇಗಾಡಿಯಲ್ಲಿ ದನದ ಶೆಡ್ ಸಹ ನಿರ್ಮಿಸಿಕೊಂಡಿದ್ದಾರೆ. ಹಸುಗಳ ಸಂಖ್ಯೆ ಹೆಚ್ಚಾದಂತೆ ಹಸಿರು ಮೇವಿನ ಸಮಸ್ಯೆ ಎದುರಾಯಿತು. ಹಸಿರು ಮೇವು ಕಡಿಮೆಯಾದರೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಹೊರಗಡೆ ಮೇವು ಖರೀದಿಸಿದರೆ, ಅದು ದುಬಾರಿ. ಜೋಳದ ಮೇವು ಬೆಳೆದರೆ ಒಂದೇ ಕಟಾವಿಗೆ ಮುಗಿದು ಹೋಗುತ್ತದೆ. ಅಲ್ಲದೆ ಜೋಳಕ್ಕೆ ಹುಳದ ಕಾಟ ಹೆಚ್ಚು. ಹೀಗಾಗಿ ದನಕರುಗಳಿಗೆ ಹಸಿರು ಮೇವು ಒದಗಿಸುವುದು

ದಿನೇಶ್‌ಗೆ ದೊಡ್ಡ ಸಮಸ್ಯೆಯೇ ಆಗಿತ್ತು.

ಅಧಿಕ ಮೇವು ಇಳುವರಿ, ಹೆಚ್ಚು ಲಾಭ: ನೇಪಿಯರ್ ಹುಲ್ಲು ಇತರ ಸೀಮೆ ಹುಲ್ಲಿಗಿಂತೆ ಹೆಚ್ಚು ಮೃದುವಾಗಿದ್ದು, ಹೆಚ್ಚಿನ ನೀರಿನಾಂಶ, ಹಾಗೂ ಸಮೃದ್ಧ ಪೋಷಕಾಂಶಗಳಿಂದ ಕೂಡಿದೆ. ಇದು ಪಶುಗಳಿಗೆ ಉತ್ತಮ ಗುಣಮಟ್ಟದ ಆಹಾರವಾಗಿದೆ. ನೇಪಿಯರ್ ಹುಲ್ಲು ದನಕರುಗಳಿಗೆ

ಸಮೃದ್ಧ ಹಸಿರು ಮೇವು ದೊರೆಯುತ್ತಿದ್ದು, ಹಾಲಿನ ಉತ್ಪಾದನೆ

ಸಹ ಹೆಚ್ಚಾಗಿದೆ. ನೇಪಿಯರ್ ಹುಲ್ಲನ್ನು ಕುರಿ ಮೇಕೆಗಳಿಗೂ ಹಾಕುವುದರಿಂದ ಅವು ಸಹ ಉತ್ತಮ ಬೆಳವಣಿಗೆಯಾಗಲಿವೆ.

ನೇಪಿಯರ್ ಹುಲ್ಲು

ನೇಪಿಯರ್ ಹುಲ್ಲಿನ ಕಟ್ಟಿ ನಾಟಿ ಮಾಡಿದರೆ ಐದು-ಆರು ವರ್ಷದರೆಗೆ, ನೀರು ಹಾಗೂ ಕಡಿಮೆ ಗೊಬ್ಬರದಲ್ಲಿ ಉತ್ತಮ ಇಳುವರಿ ನೀಡುತ್ತದೆ. ಕೀಟ ಹಾಗೂ ರೋಗಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಅರ್ಧ ಎಕರೆಗೆ ಒಂದು ಕಟಾವಿಗೆ ಸರಾಸರಿ 20 ಟನ್ ಮೇವು ದೊರೆಯುತ್ತದೆ. ವಾರ್ಷಿಕವಾಗಿ 7-8 ಬಾರಿ ಕಟಾವಿಗೆ ಬರಲಿದೆ. ನೇಪಿಯರ್ ಹುಲ್ಲು 6-8 ಅಡಿಗಳ ಎತ್ತರದವರೆಗೆ ಬೆಳೆಯಲಿದ್ದು, ಇತರ ಹುಲ್ಲು

ಗಳಿಗಿಂತ ಹೆಚ್ಚು ಇಳುವರಿ ಬರಲಿದೆ.

ಈ ಹಿಂದೆ ದಕನರುಗಳಿಗೆ ಮೇವು ಸಂಗ್ರಹ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತಿತ್ತು. ಎಷ್ಟೋ ಸಾರಿ ದುಬಾರಿ ಮೇವು ಕೊಳ್ಳಲಾಗದೆ, ಒಣಮೇವು ನೀಡಿದ್ದರಿಂದ ಹಾಲಿನ ಉತ್ಪಾದನೆ ಸಹ ಕುಂಟಿತವಾಗಿತ್ತು. ಸಿಲ್ವಿಪ್ಯಾಶ್ಚರ್ ನಿಂದ ನಮ್ಮ ದನಕರುಗಳಿಗೆ ಆಹಾರ ಕೊರತೆ ನೀಗಿದೆ. ಸಮೃದ್ಧವಾಗಿ ಹಸಿರು ಮೇವಿನಿಂದ ದನಕರುಗಳು ಆರೋಗ್ಯವಾಗಿದ್ದು, ಹಾಲಿನ ಉತ್ಪಾದನೆ ಸಹ ಹೆಚ್ಚಾಗಿದೆ. ಈಗ ಮತ್ತಷ್ಟು ಹಸುಗಳನ್ನು ಸಾಕಣೆ ಮಾಡಬಹುದು.

-ದಿನೇಶ್ ರಾಜು, ರೈತ

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News