ಮಂಡ್ಯ | ಸೌಜನ್ಯಾ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಎ.4ರಂದು ಉಪವಾಸ ಸತ್ಯಾಗ್ರಹ

Update: 2025-03-29 00:28 IST
  • whatsapp icon

ಮಂಡ್ಯ : ಸೌಜನ್ಯ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ, ಸೌಜನ್ಯಾ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಕರ್ನಾಟಕ ರಾಜ್ಯ ರೈತಸಂಘಗಳ ಏಕೀಕರಣ ಸಮಿತಿಯ ವತಿಯಿಂದ ಎ.4ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿಯ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಅಪರಾಧಿಯನ್ನು ದೋಷ ಮುಕ್ತಗೊಳಿಸಿದ್ದು, ನಿಜವಾದ ಆರೋಪಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಲಾಗುವುದು. ಸದರಿ ಹೋರಾಟದಲ್ಲಿ ಗಿರೀಶ್ ಮಟ್ಟಣ್ಣನವರ್ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಮಿತಿಯ ಪದಾಧಿಕಾರಿಗಳ ನೇಮಕ: ರಾಜ್ಯ ಗೌರವಾಧ್ಯಕ್ಷರನ್ನಾಗಿ ಮದ್ದೂರು ರಾಮಕೃಷ್ಣಯ್ಯ, ರಾಜ್ಯ ಕಾರ್ಯಾಧ್ಯಕ್ಷರಾಗಿ ವಿದ್ಯಾಸಾಗರ್ ರಾಮೇಗೌಡ, ರಾಜ್ಯ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರಾಗಿ ಇಂಡುವಾಳು ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷರಾಗಿ ಶಂಬೂನಹಳ್ಳಿ ಸುರೇಶ್, ಮನು ಸೋಮಯ್ಯ, ಅಣ್ಣೂರು ಮಹೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಂಜೇಶ್‌ಗೌಡ, ಕೀಳಘಟ್ಟ ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಉಮೇಶ್ ಮದ್ದೂರು, ಶಿವಳ್ಳಿ ಚಂದ್ರಶೇಖರ್, ರಾಮಲಿಂಗೇಗೌಡ, ಸಂತೋಷ್ ಮಂಡ್ಯಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಳ್ಳಿ ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಸಂತೋಷ್ ಮಂಡ್ಯಗೌಡ, ಪಣಕನಹಳ್ಳಿ ನಾಗಣ್ಣ, ಚಿಕ್ಕಮರಿಗೌಡ, ಮರಿಚನ್ನೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News