ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊಟ್ಟೆ ವಿತರಣೆ : ಗೆದ್ದ ಪ್ರಗತಿಪರರ ಆಹಾರ ಸಂಸ್ಕೃತಿ ಹೋರಾಟ

Update: 2024-12-22 20:55 IST
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊಟ್ಟೆ ವಿತರಣೆ : ಗೆದ್ದ ಪ್ರಗತಿಪರರ ಆಹಾರ ಸಂಸ್ಕೃತಿ ಹೋರಾಟ
  • whatsapp icon

ಮಂಡ್ಯ : ಮಂಡ್ಯದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಲೇ ಬೇಕೆಂದು ಗಟ್ಟಿದನಿಯಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿ ಪರವಾಗಿ ಬೇಡಿಕೆ ಇಟ್ಟಿದ್ದ ಪ್ರಗತಿಪರರ ಹೋರಾಟ ಕೊನೆಗೂ ಗೆದ್ದಂತಾಗಿದೆ. ಮಂಡ್ಯ ಸಾಹಿತ್ಯ ಸಮ್ಮೇಳನ ಆಯೋಜಕರು ಸಮ್ಮೇಳನದ ಕೊನೆಯ ದಿನವಾದ ರವಿವಾರ ಸಂಜೆ ಊಟದೊಂದಿಗೆ ಸುಮಾರು 25,000ಕ್ಕೂ ಅಧಿಕ ಮೊಟ್ಟೆಯನ್ನು ವಿತರಣೆ ಮಾಡಿದ್ದಾರೆ.

ಇದಲ್ಲದೇ ರವಿವಾರದಂದು ಹಲವರು ತಾವೇ ಬಾಡೂಟವನ್ನು ತಂದು ಸಮ್ಮೇಳನ ನಡೆಯುತ್ತಿದ್ದ ಆವರಣದಲ್ಲಿ ಊಟ ಮಾಡಿದರು. ಊಟದಲ್ಲಿ ತಾರತಮ್ಯ ಮಾಡಿದ ಆಡಳಿತದ ವಿರುದ್ದ ಆಕ್ರೋಶವನ್ನೂ ಹೊರ ಹಾಕಿದರು.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಂಸ್ಕೃತಿಯ ತಾರತಮ್ಯ ಬೇಡ. ಬಹುಜನರ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಬಾಡೂಟವನ್ನು ನೀಡಬೇಕು ಎನ್ನುವ ತೀವ್ರ ಒತ್ತಾಯ ಕೇಳಿ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News