2022ರಲ್ಲಿ 4.61 ಲಕ್ಷ ರಸ್ತೆ ಅವಘಡಗಳು, ಸಾವುಗಳ ಸಂಖ್ಯೆ ಶೇ.9.4ರಷ್ಟು ಏರಿಕೆ: ಅಧ್ಯಯನ ವರದಿ ಬಹಿರಂಗ

Update: 2023-10-31 16:29 GMT

Image Source : PTI

ಹೊಸದಿಲ್ಲಿ: 2022ರಲ್ಲಿ ದೇಶದಲ್ಲಿ ಒಟ್ಟು ರಸ್ತೆ 4,61,312 ಅವಘಡಗಳು ದಾಖಲಾಗಿದ್ದು, ಅವುಗಳಲ್ಲಿ 1,51,997 ಅವಘಡಗಳು (ಶೇ.32,9) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.

‘ಭಾರತದಲ್ಲಿ ರಸ್ತೆ ಅವಘಡಗಳು-2022’ ಶೀರ್ಷಿಕೆಯ ಈ ವರದಿಯು ದೇಶದಲ್ಲಿ ಅವಘಡಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ.11.9ರಷ್ಟು ಏರಿಕೆಯಾಗುತ್ತಲೇ ಹೋಗುತ್ತಿದೆ ಹಾಗೂ ಅಪಘಾತದಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇ.9.4ರಷ್ಟು ಹೆಚ್ಚಳವಾಗಿದೆ. 2022ರಲ್ಲಿ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯು ಶೇ.15.3ರಷ್ಟು ಹೆಚ್ಚಳವಾಗಿದೆ.

ವರದಿಯ ಪ್ರಕಾರ, 2022ರಲ್ಲಿ ಒಟ್ಟು 4,61,312 ಅಪಘಾತಗಳು ದಾಖಲಾಗಿವೆ. ಅವುಗಳಲ್ಲಿ 1,51,997 (ಶೇ.32.9) ಎಕ್ಸ್ ಪ್ರೆಸ್ ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. 1,06,682 (23.1 ಶೇಕಡ) ರಾಜ್ಯ ಹೆದ್ದಾರಿಗಳು ಹಾಗೂ ಉಳಿದವು 2,02,633 (43.9 ಶೇ.) ಇತರ ರಸ್ತೆಗಳಲ್ಲಿ ಸಂಭವಿಸಿವೆ.

2022ರಲ್ಲಿ ವರದಿಯಾದ 1,68,491 ಸಾವುಗಳಲ್ಲಿ 61,038 (36.2 ಶೇ.) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. 41,012 (24.3 ಶೇ.) ರಾಜ್ಯ ಹೆದ್ದಾರಿಗಳಲ್ಲಿ ಹಾಗೂ 66,441 (39.4 ಶೇ.) ಇತರ ರಸ್ತೆಗಳಲ್ಲಿ ಸಂಭವಿಸಿವೆ ಎಂದು ವರದಿ ಬಹಿರಂಗಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News